ಮಣಿಪಾಲ್ ಫೌಂಡೇಶನ್ ನಿಂದ ಅಕ್ಷಯ ಪಾತ್ರೆಗೆ ಧನ

ಬೆಂಗಳೂರು, ಜು.9: ಮಣಿಪಾಲ್ ಫೌಂಡೇಶನ್, ದೇಶದ ಪ್ರಸಿದ್ಧ ಸಮಾಜ ಸೇವಾ ಸಂಸ್ಥೆಯಾದ ಅಕ್ಷಯ ಪಾತ್ರೆಗೆ ಧನ ಸಹಾಯ ಮಾಡುತ್ತಿದ್ದು, ಅದು ಮಂಗಳೂರಿನ5000 ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ.

ಮಣಿಪಾಲ್ ಫೌಂಡೇಶನ್ ನ ಮುಖ್ಯಸ್ಥ ಡಾ. ರಾಮ್‌ದಾಸ್ ಪೈ ಅವರು ಮಂಗಳವಾರ 60 ಲಕ್ಷ ರುಪಾಯಿಯ ಚೆಕ್ ಅನ್ನು ಅಕ್ಷಯ ಪಾತ್ರೆಯ ಮುಖ್ಯಸ್ಥ ಶ್ರೀ. ಮಧು ಪಂಡಿತ್ ದಾಸ್ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷಯ ಪಾತ್ರೆಯ ಮುಖ್ಯಸ್ಥ ಶ್ರೀ. ಮಧು ಪಂಡಿತ್ ದಾಸ ಮಣಿಪಾಲ್ ಫೌಂಡೇಶನ್ ಅವರ ಈ ಉತ್ತಮ ಕಾರ್ಯವನ್ನು ಮಂಗಳೂರಿನ ಇರುವ ಮಕ್ಕಳಿಗೆ ಬಿಸಿಯೂಟ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ. ನಾವು ಡಾ. ರಾಮ್‌ದಾಸ್ ಪೈ ಮತ್ತು ಅವರ ಬಳಗಕ್ಕೆ ಅಭಾರಿಯಾಗಿದ್ದೇವೆ. ಮಣಿಪಾಲ ಪೌಂಡೇಶನ್ ಈಗಾಗಲೇ ತನ್ನ ಆರ್ಥಿಕ ಸಹಾಯದಿಂದ ಹೆಸರುವಾಸಿಯಾಗಿದ್ದು, ಮಣಿಪಾಲ್ ಫೌಂಡೇಶನ್ ಅವರ ಈ ಸಹಾಯವು ಇತರೆ ಸಂಘಟನೆಗಳಿಗೂ ಪ್ರೋತ್ಸಾಹವನ್ನು ಕೊಟ್ಟು, ಇದೇ ರೀತಿಯ ಸಹಾಯ ಮಾಡಲು ಪ್ರೇರಣೆಯಾಗಿ ಮತ್ತು ಈ ಮೂಲಕ ಅಕ್ಷಯ ಪಾತ್ರೆ ಪ್ರತಿಷ್ಠಾನದ ಭಾರತದಲ್ಲಿ ಹಸಿವಿನ ಕಾರಣಕ್ಕಾಗಿ ಯಾವ ಮಗುವು ಶಾಲಾ ಶಿಕ್ಷಣದಿಂದ ವಂಚಿತವಾಗಬಾರದೆಂಬ ನಮ್ಮ ಗುರಿಯು ಪರಿಪೂರ್ಣವಾಗಬಹುದೆಂಬ ನಂಬಿಕೆ ನನಗಿದೆ' ಎಂದರು.

ಅಕ್ಷಯ ಪಾತ್ರೆ ಯೋಜನೆ ವಿಶೇಷತೆ
*ಅಕ್ಷಯ ಪಾತ್ರ ಕಾರ್ಯಕ್ರಮವು ಕೇಂದ್ರ ಸೌಕರ್ಯವೊಂದಿದೆ. ಅಡುಗೆಗಾಗಿ ಸ್ವಯಂಚಾಲಿತ ಆಹಾರ ಕೋಣೆಹೊಂದಿದ್ದು, ಅದು ಉಪಹಾರವನ್ನು ವಿವಿಧ ಶಾಲೆಗಳಿಗೆ ವಿಶೇಷ ವಾಹನಗಳಲ್ಲಿ ಸಾಗಿಸಲು ಸಹಕಾರಿಯಾಗುತ್ತದೆ.
*ಅಕ್ಷಯ ಪಾತ್ರದ ಅಡುಗೆ ಮನೆಯಲ್ಲಿ 10,00,00 ಆಹಾರ ಪದಾರ್ಥಗಳನ್ನು ಕೇವಲ 5ಗಂಟೆಯೊಳಗೆ ಅತೀ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಬಳಸಿ ತಯಾರಿಸಲಾಗುತ್ತದೆ.
*ಮೂರು ಬಗೆಯ ಆಹಾರ ಪದಾರ್ಥಗಳನ್ನು ಪ್ರತೀ ದಿನ ಶಿಫಾರಿಸ್ಸಿನನ್ವಯ ಕೊಡಲಾಗುತ್ತದೆ.
*ಅಡುಗೆಗಾಗಿ ಯಂತ್ರೋಪಕರಣಗಳ ಬಳಕೆ ಹೆಚ್ಚಿರುವುದರಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಕೊಡಲು ಸಾಧ್ಯವಾಗುತ್ತದೆ.
*ಈ ಕಾರ್ಯಕ್ರಮವು ಶಿಕ್ಷಣ ಮತ್ತು ಆರೋಗ್ಯಕ್ಕೂ ಮಹತ್ವ ಕೊಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
*ಅಕ್ಷಯ ಪಾತ್ರವು ಜಾತ್ಯತೀತವಾಗಿದ್ದು, ಸರಕಾರಿ ಶಾಲಾ ಮಕ್ಕಳಿಗೆ ಪ್ರಯೋಜನಕಾರಿಯಾಗಿರುತ್ತೆ. ಅಲ್ಲಿ ಭೇದ-ಭಾವಗಳಿಗೆ ಆಸ್ಪದವಿರುವುದಿಲ್ಲ. ಈ ಯೋಜನೆ ಯಾವುದೇ ರೀತಿಯ ಹಣ ಗಳಿಕೆ ಉದ್ಯಮವಲ್ಲ.
(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+