ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಸರ್ಕಾರ ಪತನ

By Staff
|
Google Oneindia Kannada News

ಶ್ರೀನಗರ, ಜು. 7 : ಅಮರನಾಥ್ ದೇವಾಲಯಕ್ಕೆ ಭೂಮಿ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದ ಮುಖ್ಯಮಂತ್ರಿ ಗುಲಾಮ್ ನಬಿ ಅಜಾದ್ ನೇತೃತ್ವದ ಕಾಂಗ್ರೆಸ್ ಸೋಮವಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿ ಅಧಿಕಾರ ಕಳೆದುಕೊಂಡಿತು. ಕಳೆದ 43 ತಿಂಗಳಿನಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಿಶ್ವಾಸಮತ ಯಾಚನೆಯಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಗುಲಾಮ್ ನಬಿ ಅಜಾದ್ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಅಮರನಾಥ್ ದೇವಾಲಯಕ್ಕೆ ನೀಡಿದ್ದ ಭೂಮಿ ವಿವಾದ ಹಿನ್ನಲೆಯಲ್ಲಿ ಉಂಟಾಗಿದ್ದ ಗಲಭೆಯಿಂದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ನಾಯಕಿ ಮೆಹಬೂಬಾ ಮುಪ್ತಿ ಕಳೆದ ತಿಂಗಳು ಜೂ. 28 ರಂದು ಬೆಂಬಲ ಹಿಂತೆಗೆದುಕೊಂಡಿದ್ದರು. ಪ್ರತಿಪಕ್ಷಗಳ ನಾಯಕರು ಆಡಳಿತ ಸರ್ಕಾರದಲ್ಲಿ ಸಂಖ್ಯೆಬಲದ ಕೊರತೆ ಇದೆ. ಆದ್ದರಿಂದ ವಿಶ್ವಾಸಮತಕ್ಕೆ ಆಹ್ವಾನಿಸಬೇಕು ಎಂದು ಪಟ್ಟು ಹಿಡಿದ ಹಿನ್ನಲೆಯಲ್ಲಿ ರಾಜ್ಯಪಾಲ ಎನ್.ಎನ್.ಓಹ್ರಾ ಕಾಂಗ್ರೆಸ್ ಸರ್ಕಾರ ಸದನದಲ್ಲಿ ತನ್ನ ವಿಶ್ವಾಸಮತ ತೋರಿಸಬೇಕು ಎಂದು ತಾಕೀತು ಮಾಡಿದ್ದರು. ಸೋಮವಾರ ದಿನ ನಿಗದಿಪಡಿಸಲಾಗಿತ್ತು.

ಅಮರನಾಥ್ ದೇವಾಲಯಕ್ಕೆ ಭೂಮಿ ನೀಡಿದ್ದ ಕಾಂಗ್ರೆಸ್ ಸರ್ಕಾರದ ಕ್ರಮ ರಾಜ್ಯಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿತ್ತು. ಜತೆಗೆ ಪ್ರತಿಭಟನೆ, ಸಾವು, ನೋವು, ನಿಷೇಧಾಜ್ಞೆ, ಗೋಲಿಬಾರ್ ನಿಂದ ರಾಜ್ಯದಲ್ಲಿ ಸಂಪೂರ್ಣವಾಗಿ ಅಶಾಂತಿ ವಾತಾವರಣ ತಲೆದೋರಿತ್ತು. ಕಳೆದ 43 ತಿಂಗಳಗಳಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನಗೊಂಡಂತಾಗಿದೆ. ಮುಖ್ಯಮಂತ್ರಿ ಗುಲಾಮ್ ನಬಿ ಅಜಾದ್ ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ಭಾರತ್ ಬಂದ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ
ದೇಶವ್ಯಾಪಿ ಬಂದ್‌ಗೆ ರಾಜ್ಯದಲ್ಲಿ ಪಾಕ್ಷಿಕ ಬೆಂಬಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X