ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಿ ಸಂಗ್ರಹಣೆಯಲ್ಲಿ ದಾಖಲೆ ಜೀ ಕನ್ನಡಕ್ಕೆ ಲಿಮ್ಕಾ ಗರಿ

By Staff
|
Google Oneindia Kannada News

Zee Kannada on Limca Book of Recordsಬೆಂಗಳೂರು, ಜೂ.24: ಜೀ ಕನ್ನಡ ಸಹಿ ಸಂಗ್ರಹಣಾ ಅಭಿಯಾನ ಹೊಸ ದಾಖಲೆ ನಿರ್ಮಿಸಿದೆ. 2007ರ ವಿಶ್ವ ಕಪ್ ಕ್ರಿಕೆಟ್‌ಗೆ ತೆರಳಿದ್ದ ಭಾರತೀಯ ತಂಡಕ್ಕೆ ಶುಭ ಹಾರೈಸಲು ಜೀ ಕನ್ನಡ ನಡೆಸಿದ ಕರವಸ್ತ್ರ ಸಹಿ ಸಂಗ್ರಹಣಾ ಅಭಿಯಾನ ಲಿಮ್ಕಾ ದಾಖಲೆಗೇರಿದೆ. ಲಿಮ್ಕಾ ಪುಸ್ತಕದಲ್ಲಿ ಅತಿಸಣ್ಣ ಮತ್ತು ಅತಿದೊಡ್ಡ ಮಾನವ ನಿರ್ಮಿತ ದಾಖಲೆಗಳು ವಿಭಾಗದಲ್ಲಿ ಈ ದಾಖಲೆ ಪ್ರಕಟವಾಗಿದೆ. ಜೀ ಕನ್ನಡ ಲಿಮ್ಕಾ ದಾಖಲೆಯಲ್ಲಿ ಸೇರಿದ ಪ್ರಪ್ರಥಮ ಕನ್ನಡ ವಾಹಿನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಅಭಿಯಾನವನ್ನು 2007ರ ಫೆಬ್ರವರಿಯಲ್ಲಿ ಕೈಗೊಳ್ಳಲಾಗಿತ್ತು. ಜೀ ಕನ್ನಡ ತಂಡ ರಾಜ್ಯದಲ್ಲಿಯ 50ಕ್ಕೂ ಹೆಚ್ಚು ಶಾಲೆ ಹಾಗೂ 25ಕ್ಕೂ ಹೆಚ್ಚು ಕಾಲೇಜುಗಳು, ಐಟಿ ಕಂಪೆನಿಗಳು, ಎನ್.ಜಿ.ಒ, ಮಾಧ್ಯಮ ಕಛೇರಿ, ವ್ಯಾಪಾರಿ ಮಳಿಗೆಗಳು ಮುಂತಾದೆಡೆ ಭೇಟಿ ನೀಡಿ ಸುಮಾರು 55 ಸಾವಿರಕ್ಕೂ ಹೆಚ್ಚು ಸಹಿಯುಳ್ಳ ಕರವಸ್ತ್ರಗಳನ್ನು ಸಂಗ್ರಹಿಸಿ ವಿಶ್ವದ ಅತಿ ಉದ್ದದ ಕರವಸ್ತ್ರ ಸರಪಳಿಯನ್ನು ನಿರ್ಮಿಸಿತ್ತು. ಸುಮಾರು 17 ಕಿ.ಮಿಗಿಂತ ಹೆಚ್ಚು ಉದ್ದದ ಸರಪಳಿ ಇದಾಗಿತ್ತು. ಶ್ರೀಕಂಠ ನರಸಿಂಹರಾಜ ಒಡೆಯರ್ ಸಮ್ಮುಖದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ದಾಖಲೆಯ ಸರಪಳಿ ನಿರ್ಮಿಸಿ ಸಹಿಹಾಕಿದ ಅತಿದೊಡ್ಡ (48 ಅಡಿx52.5ಅಡಿ) ಕರವಸ್ತ್ರವನ್ನು ಕೂಡಾ ಪ್ರದರ್ಶಿಸಲಾಗಿತ್ತು.

ಈ ಅಭಿಯಾನಕ್ಕೆ ಕರ್ನಾಟಕದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರತಿಷ್ಠಿತ ಎಸ್ಸೆಲ್ ಗ್ರೂಪ್‌ನ ಅಧ್ಯಕ್ಷ ಸುಭಾಶ್ಚಂದ್ರ ಕರವಸ್ತ್ರಕ್ಕೆ ಸಹಿ ಮಾಡುವ ಮೂಲಕ ಆರಂಭಗೊಂಡ ಈ ಅಭಿಯಾನದಲ್ಲಿ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಎಂ.ಪಿ ಪ್ರಕಾಶ್ ಅಲ್ಲದೆ ಇನ್ಫೋಸಿಸ್‌ ಮಂಡಳಿಯ ಸದಸ್ಯರು ಮತ್ತು ನಿರ್ದೇಶಕ ಮೋಹನದಾಸ್ ಪೈ, ಜೈನ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಚೆನ್‌ರಾಜ್ ಜೈನ್, ಕಲಾವಿದೆ ಉಮಾಶ್ರೀ, ಈಜುಗಾರ್ತಿ ನಿಶಾ ಮಿಲ್ಲೆಟ್, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರು ಕೈಜೋಡಿಸಿದ್ದರು.

ಪ್ರತಿಯೊಂದರಲ್ಲೂ ಹೊಸತನವನ್ನು ನೀಡಲು ಪ್ರಯತ್ನಿಸುವುದೇ ಜೀ ಕನ್ನಡದ ಮುಖ್ಯ ಆಶಯ. ದೇಶಾದ್ಯಂತ ಇರುವ ಜೀ ಸಿಬ್ಬಂದಿವರ್ಗದ ಸಹಕಾರ ನಮ್ಮ ಅಭಿಯಾನದ ಯಶಸ್ಸಿಗೆ ಕಾರಣ. ಇವರೆಲ್ಲರ ಶ್ರಮದಿಂದ ಅಭಿಯಾನ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿದೆ. ಜೀ ಕನ್ನಡ ಬಳಗಕ್ಕೆ ಈ ಯಶಸ್ಸಿನಿಂದ ಸಂತಸವಾಗಿದೆ" ಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X