ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗಿದ ಪದ್ಮಪ್ರಿಯಾ ಮರಣೋತ್ತರ ಪರೀಕ್ಷೆ

By Staff
|
Google Oneindia Kannada News

ಉಡುಪಿ, ಜೂ. 16 : ದೆಹಲಿ ಅಪಾರ್ಟ್ ಮೆಂಟ್ ವೊಂದರಲ್ಲಿ ನಿಗೂಢವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ಶವಪರೀಕ್ಷೆ ಪ್ರತಿಷ್ಠಿತ ಸಪ್ಥರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಗೊಂಡಿದೆ. ಸಪ್ಥರ್ ಜಂಗ್ ಆಸ್ಪತ್ರೆಯ ಇಬ್ಬರು ಹಿರಿಯ ವೈದ್ಯರು ಮತ್ತು ಏಮ್ಸ್ ನ ಒಬ್ಬರು ವೈದ್ಯರನ್ನೊಳಗೊಂಡ ತಜ್ಞರ ತಂಡ ಮರಣೋತ್ತರ ಪರೀಕ್ಷೆ ನಡೆಸಿತು.

ಅನೇಕ ಅನುಮಾನಗಳ ಹುತ್ತವಾಗಿರುವ ಸಾವಿನ ರಹಸ್ಯ ಕುರಿತು ಶೀಘ್ರದಲ್ಲಿ ಸತ್ಯಾಂಶ ಹೊರ ಬರುವ ನಿರೀಕ್ಷೆಯಿದೆ. ಆದರೆ ಮರಣೋತ್ತರ ಪರೀಕ್ಷೆಯ ವರದಿಗೆ ಎರಡು ಮೂರು ದಿನ ಕಾಲಾವಕಾಶ ಬೇಕಿರುವುದರಿಂದ ವರದಿ ತಡವಾಗುವ ಸಾಧ್ಯತೆಗಳಿವೆ. ಕಾರಣ ವರದಿಯನ್ನು ಸಮಗ್ರವಾಗಿ ಪರಿಶೀಲನೆ ಮಾಡಿದ ನಂತರ ವೈದ್ಯರು ವರದಿ ನೀಡಬೇಕಿದ್ದರಿಂದ ಪರೀಕ್ಷೆಯ ವರದಿ ತಡವಾಗಲಿದೆ ಎನ್ನಲಾಗಿದೆ.ಇತ್ತ ಕರ್ನಾಟಕ ಪೊಲೀಸರು ಪ್ರಕರಣವನ್ನು ಭೇದಿಸಲು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎರಡು ತಂಡವನ್ನು ರಚಿಸುವ ಚಿಂತನೆ ನಡೆಸಿದ್ದಾರೆ.

ಅತುಲ್ ಮನೆಗೆ ಬಿಗಿ ಭದ್ರತೆ

ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಅವರ ಪ್ರಕರಣದ ಪ್ರಮುಖ ಎಂದು ಶಂಕೆ ವ್ಯಕ್ತಪಡಿಸಲಾಗಿರುವ ಆರ್ಕಿಟೆಕ್ಟ್ ಅತುಲ್ ಕುಟುಂಬ ಸದಸ್ಯರು ಮನೆ ಖಾಲಿಮಾಡಿದ್ದಾರೆ. ನಗರದ ದೊಡ್ಡನಗುಡ್ಡದಲ್ಲಿರುವ ಅತುಲ್ ರಾವ್ ಮನೆ ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.ಪದ್ಮಪ್ರಿಯಾ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ತಗೆದುಕೊಂಡಿರುವ ಅತುಲ್ ರಾವ್ ಅವರ ಪಾತ್ರವನ್ನು ಆತನ ಕುಟುಂಬದ ಸದಸ್ಯರು ನಿರಾಕರಿಸಿದ್ದಾರೆ.

ಊಹಾಪೋಹಕ್ಕೆ ಕುಟುಂಬದವರ ನಿರಾಕರಣೆ

ಪದ್ಮಪ್ರಿಯ ಅವರ ಸಾವಿನ ಹಿಂದೆ ಎದ್ದಿರುವ ಅನೇಕ ಉಹಾಪೋಹಗಳ ಕುಟುಂಬದ ಸದಸ್ಯರು ತಳ್ಳಿ ಹಾಕಿದ್ದಾರೆ. ಪತ್ರಿಕೆ ಮತ್ತು ಟಿವಿ ಗಳಲ್ಲಿ ಬರುತ್ತಿರುವ ಸುದ್ದಿಗಳಿಂದ ನಮಗೆ ಅತೀವ ನೋವಾಗಿದೆ. ನನ್ನ ಅಕ್ಕನ ಕುರಿತು ಆಗುತ್ತಿರುವ ವರದಿಗಳಿಂದ ನಮ್ಮ ಕುಟುಂಬದ ಸದಸ್ಯರಿಗೆ ತೀವ್ರ ಘಾಸಿ ಉಂಟು ಮಾಡಿದೆ. ಆಕೆಯ ನಡತೆ ಬಗ್ಗೆ, ಸಂಸಾರದ ಸಮಸ್ಯೆ, ಕೌಟುಂಬಿಕ ಭಿನ್ನಾಭಿಪ್ರಾಯ ಈ ಎಲ್ಲ ವರದಿಗಳು ಸುಳ್ಳು. ಆಕೆ ತುಂಬಾ ಬುದ್ಧಿವಂತೆ.ಕುಟುಂಬದ ಎಲ್ಲ ಆಗೂಹೋಗುಗಳನ್ನು ನೋಡಿಕೊಳ್ಳುತ್ತಿದ್ದಳು.ಆದರೆ ಇಂತಹ ಕೆಲಸಮಾಡಿಕೊಂಡಿದ್ದು, ನಮಗೂ ಕೂಡಾ ಏನು ತಿಳಿಯದಾಗಿದೆ. ತನಿಖೆಯಿಂದ ಮಾತ್ರ ಈ ಸತ್ಯಾಂಶ ಹೊರಬರಲಿದೆ ಎಂದು ಸಹೋದರ ರಾಜಶೇಖರ್ ದುಃಖದಿಂದ ಹೇಳುತ್ತಾರೆ.

ಆಸ್ಕರ್ ಭೇಟಿ: ಪದ್ಮಪ್ರಿಯ ಮರಣೋತ್ತರರ ಪರೀಕ್ಷೆ ನಡೆಯುತ್ತಿರುವ ಸಪ್ಥರ್ ಜಂಗ್ ಆಸ್ರತ್ರೆಗೆ ಕಾಂಗ್ರೆಸ್ ಮುಖಂಡ ಆಸ್ಕರ್ ಪರ್ನಾಂಡಿಸ್ ಭೇಟಿ ನೀಡಿದ್ದರು. ಈ ಪ್ರಕರಣ ಕುರಿತು ಹೆಚ್ಚು ಮಾತನಾಡಲು ಇಷ್ಟ ಪಡದ ಅವರು, ಇದೊಂದು ದುರದೃಷ್ಟಕರ ಸಂಗತಿ ಎಂದು ವಿಷಾಧಿಸಿದರು.ಕರ್ನಾಟಕ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಅತುಲ್ ಎಂಬಾತನನ್ನು ದೆಹಲಿಗೆ ಕರೆದುಕೊಂಡು ಬರುತ್ತಿದ್ದಾರೆ ಎನ್ನುವ ಸುದ್ದಿ ತಿಳಿದಿದ್ದು, ಆ ನಂತರ ಪ್ರಕರಣ ದಿಕ್ಕು ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಶಾಸಕ ರಘುಪತಿ ಪತ್ನಿ ಪದ್ಮಪ್ರಿಯಾ ನಿಗೂಢ ಸಾವು
ಶಾಸಕರಘುಪತಿ ಪತ್ನಿ ಪದ್ಮಪ್ರಿಯ ಮಾಲೂರಿನಲ್ಲಿ ಪತ್ತೆ
ಇನ್ನೂ ಕಗ್ಗಂಟಾಗಿರುವ ಪದ್ಮಪ್ರಿಯಾ ನಾಪತ್ತೆ ಪ್ರಕರಣ
ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X