ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರು ಮುಸ್ಲಿಂ? ಬಿಜೆಪಿ ಸಚಿವರ ಸ್ವಗತ

By Staff
|
Google Oneindia Kannada News

*ಪ್ರೊ. ಮುಮ್ತಾಜ್ ಅಲಿ ಖಾನ್

Prof Mumtaz Ali khanನನ್ನನ್ನು ಮುಸ್ಲಿಂ ಅಲ್ಲ, ಮುಸ್ಲಿಂ ವಿರೋಧಿ, ಹಿಂದೂಗಳ ಪರ ಎಂಬ ಹೊಸ ರಾಗ, ತಾಳವನ್ನು ಹಮ್ಮಿಕೊಂಡವರು ಬೆರಳೆಣಿಕೆ ಸಂಖ್ಯೆಯಲ್ಲಿರುವ ನನ್ನ ಮುಸ್ಲಿಂ ಬಂಧುಗಳು. ಅವರ ಮೊದಲನೆಯ ಆರೋಪ ನಾನು ಮುಸ್ಲಿಂ ಅಲ್ಲ. ಯಾವಾಗ ಮುಸ್ಲಿಂ ಅಲ್ಲ ಎಂದು ಹೇಳಿದರೊ ಮುಂದಿನ ಆರೋಪಗಳಿಗೆ ಅವಕಾಶವೇ ಇಲ್ಲ. ಮುಸ್ಲಿಂ ಹೌದು ಅಥವಾ ಇಲ್ಲ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ .ಯಾವ ವ್ಯಕ್ತಿ 'ಲಾಹಿಲಾಹ ಇಲ್ಲಲ್ಲಾಹು ಮುಹಮ್ಮದರ್ ರಸೂಲಲ್ಲ' ಎಂದು ಹೇಳುತ್ತಾನೋ, ಪವಿತ್ರ ಖುರಾನಿನಲ್ಲಿ ನಂಬಿಕೆ ಇಡುತ್ತಾನೋ ಅವನು ಮುಸ್ಲಿಂ. ಜನ್ಮತಃ ಯಾರೂ ಮುಸ್ಲಿಮರಲ್ಲ. ತಂದೆ ತಾಯಿ ಮುಸ್ಲಿಂ ಆಗಿದ್ದರೂ ಹುಟ್ಟಿದ ಮಗು ತಕ್ಷಣ ಮುಸ್ಲಿಂ ಆಗುವುದಿಲ್ಲ. ನಾನು ಮೇಲೆ ಹೇಳಿರುವ ಮೂಲತತ್ವದಲ್ಲಿ ವಿಶ್ವಾಸವಿಟ್ಟು ಬಾಯಿಂದ ಹೇಳುತ್ತಾನೋ ಅವನೇ ಮುಸ್ಲಿಂ. ಈ ತತ್ವದ ಅರ್ಥ" ದೇವನುಒಬ್ಬನೇ, ಪರ್ಯಾಯ ದೇವರಿಲ್ಲ. ಮುಹಮ್ಮದ್ ಅವರು ಪ್ರವಾದಿಗಳು" -ಇಂತಹ ವಿವಾದಾಸ್ಪದವಿಲ್ಲದ, ಅರ್ಥಪೂರ್ಣ ಮಾತಿದ್ದರೂ ಕೆಲವರ ಪ್ರವೃತ್ತಿ ಇಸ್ಲಾಂ ಧರ್ಮಕ್ಕೆ ವಿರುದ್ಧ ಮಾತಾಡುವುದು.

ನನ್ನನ್ನು 'ಶಿಯಾ' ಗುಂಪಿನವನು. ಆ ಕಾರಣಕ್ಕೆ ನಾನು ಮುಸಲ್ಮಾನನಲ್ಲ. ನನಗೆ ದುಃಖವಾಗುವುದು, ಶಿಯಾ-ಸುನ್ನಿ ಭೇದಭಾವನೆ ಇಸ್ಲಾಂ ಮೂಲತತ್ವಕ್ಕೆ ವಿರುದ್ಧವಾದುದು. ಇಂತಹ ವಾದ ಸರಿಯಲ್ಲ. ನಾನಂತೂ ಶಿಯಾ ಅಲ್ಲ. ನನ್ನ ಹೆಸರಿನಲ್ಲಿ 'ಅಲಿ' ಎಂಬ ಪದಸೇರಿದೆ. 'ಅಲಿ' ಎಂದರೆ ಶಿಯಾ ಆಗುವುದಿಲ್ಲ. 'ಹಜರತ್ ಅಲಿ' ರವರು ಪ್ರವಾದಿ ಮುಹಮ್ಮದ್ ರವರ ಅಳಿಯ. 'ಅಲಿ' ಶಬ್ದವನ್ನು ವಿರೋಧಿಸಿದರೆ, ಪ್ರವಾದಿಯವರನ್ನು ವಿರೋಧ ಮಾಡಿದಂತೆ. ಸುನ್ನಿ, ಶಿಯಾ ಪಂಗಡಗಳಲ್ಲಿ ಸ್ವಲ್ಪ ಸಂಸ್ಕೃತಿ ವ್ಯತ್ಯಾಸ ಕಂಡುಬರುವುದು. ಆದರೆ ಇವರನ್ನು ಮುಸ್ಲಿಂ ಅಲ್ಲ ಅಂದರೆ 'ಅಲ್ಲಾಹ್ ' ಗೆ ಅವಮಾನ ಮಾಡಿದಂತೆ. ನಾನು ಮುಸ್ಲಿಂ ವಿರೋಧಿ ಮತ್ತು ಹಿಂದೂ ಪರ. ಇದೂ ತಪ್ಪು.

ನಾನುಮುಸ್ಲಿಂ ಸಮಾಜಕ್ಕೆ 25 ವರ್ಷಗಳಿಂದ ದುಡಿದಷ್ಟು ಮುಸ್ಲಿಂ ರಾಜಕೀಯ ನಾಯಕರು ಮಾಡಿಲ್ಲ. ಮುಸ್ಲಿಮರು ಈ ದೇಶಕ್ಕೆ ಭಾರವಾಗಬಾರದು, ರಾಷ್ಟ್ರೀಯತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಹಿಂದೂಗಳೊಡನೆ ಕಲೆತು, ಬೆರೆತು ಸಹೋದರತ್ವದಿಂದ ಬಾಳಬೇಕು ಎಂದು ಹೇಳಿದರೆ , ಅದು ತಪ್ಪೇ?
ಸಂಸ್ಕೃತ ಭಾಷೆಗೆ ಗೌರವ ಕೊಟ್ಟರೆ ತಪ್ಪೇ? ದೇವಸ್ಥಾನದೊಳಗೆ ಹೋದರೆ ತಪ್ಪೇ? ಹಿಂದುಗಳು ನನಗೆಂದೂ ಪ್ರಶ್ನಿಸಿಲ್ಲ ಏಕೆ ಪೂಜೆ ಮಾಡುವುದಿಲ್ಲ ಎಂದು. ಅವರಿಗೆ ಗೊತ್ತು ಇಸ್ಲಾಂ ಧರ್ಮದಲ್ಲಿ ವಿಗ್ರಹಾರಾಧನೆಗೆ ಅವಕಾಶವಿಲ್ಲ. ಹಿಂದೂ ಸಮಾಜ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಇಸ್ಲಾಂ ಧರ್ಮದ ಮೂಲ ತತ್ವಗಳೂ ಈ ದಿಕ್ಕಿನಲ್ಲಿದೆ.

ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರನ್ನು ಒಬ್ಬ ಹಿರಿಯ ಮುಸ್ಲಿಂ ನಾಯಕರು, 'ಅವರು ಮುಸಲ್ಮಾನರಲ್ಲ, ವೀಣೆ ನುಡಿಸುತ್ತಾರೆ, ದೇವಸ್ಥಾನದೊಳಗೆ ಪ್ರವೇಶಿಸುತ್ತಾರೆ, ಸಂಸ್ಕೃತ ಭಾಷೆಗೆ ಗೌರವಕೊಡುತ್ತಾರೆ, ಸಸ್ಯಾಹಾರಿಗಳು' ಎಂದರು. ಎಂತಹ ವಕ್ರದೃಷ್ಟಿ ಇವರದು. ಇಂದು ಡಾ.ಕಲಾಂರವರು ರಾಷ್ಟ್ರಪತಿಗಳಲ್ಲ. ಆದರೆ ಹಿಂದೆ ಇದ್ದಷ್ಟು ಗೌರವ ಅವರಿಗೆ ಈಗಲೂ ದೊರಕುತ್ತಿದೆ. ದಿ. ನ್ಯಾಯಮೂರ್ತಿ ಎಂ.ಸಿ. ಚಾಗ್ಲಾರವರನ್ನೂ ಮುಸ್ಲಿಂ ಅಲ್ಲ ಎಂದು ಕೆಲವರು ಹೇಳಿದ್ದರು. ಅಂದರೆ ಯಾರು ದೇಶಭಕ್ತರಾಗಿರುತ್ತಾರೋ, ಭಾರತೀಯತೆ, ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುತ್ತಾರೋ, ಅವರೆಲ್ಲ ಮುಸ್ಲಿಮರಲ್ಲ, ಕಟುವಾದಿಗಳು, ಉಗ್ರವಾದಿಗಳು, ಉಗ್ರಗಾಮಿಗಳು, ದರೋಡೆಕೋರರು, ಕಳ್ಳಭಟ್ಟಿ ಸಾರಾಯಿ ವ್ಯಾಪಾರದಲ್ಲಿರುವವರು ,ಅಪರಾಧಿಗಳೂ ಮಾತ್ರ ಮುಸ್ಲಿಮರೇ? ಎಂತಹ ಘೋರ ಪಾಪದ ಮಾತು. ಇವರೆಲ್ಲರೂ ಇಸ್ಲಾಂ ಧರ್ಮದ್ರೋಹಿಗಳು, ಹಿಂದೂ ಮುಸ್ಲಿಂ ಅನ್ಯೋನ್ಯವಾಗಿ, ಹಿತಬಾಂಧವ್ಯವನ್ನಿಟ್ಟು ಸುಖ ಜೀವನ ನಡೆಸಿ, ರಾಷ್ಟ್ರದ ಭದ್ರತೆಗೆ, ಅಭಿವೃದ್ದ್ಧಿಗೆ ಬದ್ಧರಾಗಿರಬೇಕು. ಈ ಭಾವನೆಗೆ ಎಲ್ಲರೂ ಶರಣಾಗಿರಬೇಕು, ನಾನು ಇಂತಹವರಲ್ಲಿ ಒಬ್ಬ. ಇಸ್ಲಾಂ ಧರ್ಮದ ಮೂಲತತ್ತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X