ಪಾಕ್ ವೇಗಕ್ಕೆ ಬ್ರೇಕಾಕಲು ಧೋನಿ ಪಡೆ ಕಣಕ್ಕೆ
ಢಾಕಾ, ಜೂ.10: ಸತತ 12 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ತಂಡ ಈಗ ಶೋಯೆಬ್ ಮಲಿಕ್ ನಾಯಕತ್ವದಲ್ಲಿ 13ನೇ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದ್ದರೆ, ಭಾರತದ ಯುವ ಪಡೆ ಪಾಕಿಸ್ತಾನದ ಉತ್ಸಾಹಕ್ಕೆ ತಣ್ಣೀರೆರಚುವ ಸಂಭ್ರಮದಲ್ಲಿದೆ. ಮಂಗಳವಾರ ಮಿರ್‌ಪುರದಲ್ಲಿರುವ ಷೇರ್-ಎ-ಬಾಂಗ್ಲಾ ಕ್ರೀಡಾಂಗಣ ಈ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಈ ಸರಣಿಯಲ್ಲಿ ದಿಗ್ಗಜ ತ್ರಿವಳಿಗಳಿ ಆಟಗಾರರಾದ ಸಚಿನ್,ಗಂಗೂಲಿ ಮತ್ತು ದ್ರಾವಿಡ್ ಇಲ್ಲದಿರುವುದು ಭಾರತ ತಂಡಕ್ಕೆ ದೊಡ್ದ ಕೊರತೆಯಾಗಿ ಕಾಡಬಹುದು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಚುಟುಕು ಕ್ರಿಕೆಟ್‌ನಲ್ಲಿ ಮುಳುಗಿ ಹೋಗಿದ್ದ ಆಟಗಾರರು ಈಗ ಏಕದಿನ ಪಂದ್ಯಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಐಪಿಎಲ್ ಗುಂಗಿನಿಂದ ಇನ್ನೂ ಹೊರಬರದ ಧೋನಿ ಪಡೆ ಇದಕ್ಕೆಲ್ಲಾ ಹೇಗೆ ಉತ್ತರ ನೀಡುತ್ತದೆ ಎನ್ನುವುದು ಕಾಲವೇ ನಿರ್ಧರಿಸಲಿದೆ. ಸಾಲದಕ್ಕೆ ಟ್ವೆಂಟಿ-20 ಮುಗಿದ ಮೇಲೆ ಆಟಗಾರರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಲಭಿಸಿರಲಿಲ್ಲ.ಈ ಎಲ್ಲ ಸಮಸ್ಯೆಗಳನ್ನು ಮೀರಿ ಧೋನಿ ನಾಯಕತ್ವದ ಭಾರತ ತಂಡ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ನಿರೀಕ್ಷೆ ಇದೆ.
ಕನ್ನಡದಲ್ಲಿ ವೀಕ್ಷಕ ವಿವರಣೆ: ದಟ್ಸ್‌ಕನ್ನಡ.ಕಾಮ್ ಇದೇ ಮೊದಲ ಬಾರಿಗೆ ತ್ರಿಕೋಣ ಸರಣಿಯ ಕ್ಷಣಕ್ಷಣದ ವೀಕ್ಷಕ ವಿವರಣೆಯನ್ನು ಕನ್ನಡದಲ್ಲಿ ನೀಡಲಿದೆ. ತ್ರಿಕೋಣ ಸರಣಿಯ ಕನ್ನಡ ವೀಕ್ಷಕ ವಿವರಣೆ ಈಗ ನಿಮ್ಮ ಬೆರಳ ತುದಿಯಲ್ಲಿ ಲಭ್ಯ.
(ದಟ್ಸ್‌ಕನ್ನಡ ಕ್ರೀಡಾವಾರ್ತೆ)












Click it and Unblock the Notifications