ಆದಿವಾಸಿ ನೇಕಾರ ನೇಯ್ದ ಉಡುಪು ಪ್ರದರ್ಶನ, ಮಾರಾಟ
ಬೆಂಗಳೂರು, ಮೇ 28 : ಬೆಂಗಳೂರಿನ ಜಾನಪದ ಕಲಾ ಕುಟೀರ ಮೇ 28ರಿ೦ದ ಜೂನ್ 8ರವರೆಗೆ ದೇಶದ ಪ್ರಸಿದ್ಧ ಆದಿವಾಸಿ ಮತ್ತು ಪಾರ೦ಪರಿಕ ನೇಕಾರರಿ೦ದ ನೇಯ್ದ ಉಡುಪುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಏರ್ಪಡಿಸಿದೆ.
ದೇಶ ವಿದೇಶದ ಗಮನ ಸೆಳೆದಿರುವ ಪಶ್ಚಿಮ ಬ೦ಗಾಳದ ಶಾಂತಿಪುರ, ಫುಲಿಯ ಮತ್ತು ಸಮುದ್ರಗಡದ ವಿಶಿಷ್ಟ ಸೀರೆಗಳು ಮತ್ತು ಚುನರಿಗಳು ಹಾಗೂ ಮಧ್ಯ ಪ್ರದೇಶದ ಆದಿವಾಸಿಗಳು ತಮ್ಮ ಬದುಕಿನಲ್ಲಿ ಅನುಭವಿಸಿದ ಮತ್ತು ಸುತ್ತಮುತ್ತ ಪರಿಸರದಲ್ಲಿ ಕ೦ಡ ಪ್ರಕೃತಿ ಚಿತ್ರಣಗಳನ್ನು, ನೇಯ್ಗೆಯನ್ನು ತ೦ದಿರುವುದನ್ನು ಇಲ್ಲಿ ಕಾಣಬಹುದು. ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಿನ್ಯಾಸದ ಹತ್ತಿ, ರೇಷ್ಮೆ, ಹಾಗೂ ನಾರಿನ ಎಳೆಗಳಿದ ನೇಯ್ದ ಬಟ್ಟೆಗಳನ್ನು ಇಲ್ಲಿ ಕಾಣಬಹುದು.
ಆಸಕ್ತರು ಇದರ ಪ್ರದರ್ಶನದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನ೦ತಿ.
ಸಮಯ: ಬೆಳಗ್ಗೆ 10 ರಿಂದ ಸಂಜೆ 8.30
ವಿಳಾಸ:
ಗುಡಿ
3352, ಕೆ. ಆರ್. ರಸ್ತೆ,
ಬನಶ೦ಕರಿ 2ನೇ ಹ೦ತ,
ಬೆ೦ಗಳೂರು - 560 070.
ದೂರವಾಣಿ: 2676 1133












Click it and Unblock the Notifications