ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳಭಟ್ಟಿ ದುರಂತಕ್ಕೆ ಸರ್ಕಾರವೇ ಹೊಣೆ : ಪೇಜಾವರಶ್ರೀ

By Staff
|
Google Oneindia Kannada News

Pejavarsriಉಡುಪಿ.ಮೇ 21: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಫಲವಾಗಿದ್ದು, ಸಂಪೂರ್ಣ ಕುಸಿದು ಹೋಗಿರುವುದಕ್ಕೆ ಕಳ್ಳಭಟ್ಟಿ ದುರಂತವೇ ಜ್ವಲಂತ ಸಾಕ್ಷಿ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಲಾಗಿದೆ. ಆದರೂ ಕೂಡಾ ಎಲ್ಲಡೆ ಕಳ್ಳಭಟ್ಟಿ ಸಾರಾಯಿ ಪೂರೈಕೆಯಾಗುತ್ತಿರುವುದು ಆಡಳಿತ ವೈಪಲ್ಯವನ್ನು ಎತ್ತಿ ತೋರಿಸುತ್ತದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ತಗೆದುಕೊಳ್ಳವಲ್ಲಿ ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಪರಿಣಾಮ ನೂರಾರು ಅಮಾಯಕರ ಸಾವಿಗೆ ಸರ್ಕಾರ ನೇರ ಹೊಣೆಗಾರನಾಗಬೇಕಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಸರ್ಕಾರ ಈ ಬಗ್ಗೆ ಮುಂದಿನ ದಿನಗಳಲ್ಲಾದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಒತ್ತಿ ಹೇಳಿದರು.

ಬಡ ಜನರ ಪ್ರಾಣ ಉಳಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಆದ್ದರಿಂದ ಸಂಪೂರ್ಣ ಮದ್ಯ ನಿಷೇಧವನ್ನು ಜಾರಿಗೊಳಿಸುವ ಮೂಲಕ ಬಡವರ ಹಿತವನ್ನು ಕಾಯಬೇಕಿದೆ. ಸಾರಾಯಿ ಕುಡಿತದಿಂದ ಮನುಷ್ಯ ಸರ್ವನಾಶ ಹೊಂದುತ್ತಿದ್ದಾನೆ. ಕರ್ನಾಟಕ ನೆಮ್ಮದಿ ರಾಜ್ಯವಾಗಲು ಮದ್ಯ ನಿಷೇಧ ಮಾಡುವಂತ ಗಟ್ಟಿ ನಿರ್ಧಾರವನ್ನು ತಗೆದುಕೊಳ್ಳಬೇಕಾಗಿದೆ ಎಂದು ತೀರ್ಥರು ಅಭಿಪ್ರಾಯಪಟ್ಟರು.

ಫಲಿತಾಂಶದ ನಂತರ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ನಡೆಯಬಹುದಾದ ಸಂಭವನೀಯ ಅಕ್ರಮಗಳನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅತಂತ್ರ ಸ್ಥಿತಿ ಉದ್ಭವಿಸಿದರೆ ಭಾರಿ ಪ್ರಮಾಣದಲ್ಲಿ ವ್ಯವಹಾರಗಳು ನಡೆಯುವ ಸಾದ್ಯತೆಗಳಿವೆ, ಅವನ್ನೆಲ್ಲ ಸಮರ್ಥವಾಗಿ ತಡೆಯಲು ಸರ್ಕಾರ ಈಗಾಗಲೇ ಸಾಕಷ್ಟು ತಯಾರಿ ನಡೆಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಕಿವಿ ಮಾತು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಮತ್ತಷ್ಟು ಜೀವಗಳನ್ನು ನುಂಗುತ್ತಲೇ ಇದೆ ಕಳ್ಳಭಟ್ಟಿ
ಕಳ್ಳಭಟ್ಟಿ ದುರಂತ: ರಾಜಕೀಯ ಕೆಸರೆರೆಚಾಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X