ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಸೂತ್ರ ಚುನಾವಣೆಗೆ 58 ಸಾವಿರ ಪೊಲೀಸ್ ಪಹರೆ

By Staff
|
Google Oneindia Kannada News

ಬೆಂಗಳೂರು, ಮೇ 9: ಶನಿವಾರ(ಮೇ 10) ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆ ಭಾರಿ ಸಿದ್ಧತೆ ಮಾಡಿಕೊಂಡಿದೆ. 25 ಸಾವಿರ ಪೊಲೀಸರು, 10 ಸಾವಿರ ಗೃಹ ರಕ್ಷಕರು, 15 ಸಾವಿರ ಅರೆಸೇನಾಪಡೆ ಸಿಬ್ಬಂದಿ ಹಾಗೂ 3 ಸಾವಿರ ರಾಜ್ಯ ಮೀಸಲು ಪಡೆ ಸಿಬ್ಬಂದಿ ಸೇರಿದಂತೆ ಒಟ್ಟು 58 ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದೆ.

ಪ್ರಥಮ ಹಂತದ ಚುನಾವಣೆ ನಡೆಯುವ 89 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 18,542 ಮತಗಟ್ಟೆಗಳಿವೆ. ಇದರಲ್ಲಿ 6252 ಅತೀ ಸೂಕ್ಷ್ಮ ಮತಗಟ್ಟೆ ಮತ್ತು 3500 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಭದ್ರತೆಯನ್ನು ಒದಗಿಸಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಕನಿಷ್ಠ ಇಬ್ಬರು ಸಮವಸ್ತ್ರಧಾರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಸಾಮಾನ್ಯ ಮತಗಟ್ಟೆಯಲ್ಲಿ ಒಬ್ಬ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಇಲಾಖೆ ಹೆಚ್ಚುವರಿ ಮಹಾನಿರ್ದೇಶಕ ಶಂಕರ ಬಿದರಿ ತಿಳಿಸಿದ್ದಾರೆ. ಪ್ರತಿ 20 ಮತಗಟ್ಟೆಗಳ ಅಂತರದಲ್ಲಿ ಸಂಚಾರಿ ದಳ(ಮೊಬೈಲ್ ಸ್ಕ್ವಾಡ್) ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.

ಒಟ್ಟು 200 ಅರೆಸೇನಾಪಡೆ ಕಂಪನಿಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ರಾಜ್ಯ ಮೀಸಲು ಪಡೆ ಮತ್ತು ಕ್ಷಿಪ್ತ ಕಾರ್ಯಪಡೆಯನ್ನು ನಿಯೋಜಿಸಲಾಗುತ್ತಿದೆ. ಆಯಾ ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಬೆಂಗಳೂರು ಮೈಸೂರು ಪೊಲೀಸ್ ಆಯುಕ್ತರು ಬಂದೋಬಸ್ತ್‌‍ಗಾಗಿ ಉಸ್ತುವಾರಿಯನ್ನು ವಹಿಸಲಿದ್ದಾರೆ ಎಂದು ಬಿದರಿ ತಿಳಿಸಿದರು.

ಅಕ್ರಮ, ಅವ್ಯವಹಾರಗಳು ಕಂಡು ಬಂದಲ್ಲಿ, ಅಂಥವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಬಿದರಿ, ಜನರು ನಿರ್ಭೀತಿಯಿಂದ ಮತದಾನ ಮಾಡಲು ಎಲ್ಲ ಅನುಕೂಲವನ್ನು ಇಲಾಖೆ ಮಾಡಲಿದೆ ಎಂದು ಭರವಸೆ ನೀಡಿದರು. ಶಾಂತಿಯುತ ಮತದಾನಕ್ಕೆ ಜನರು ಸಹಕರಿಸಿಬೇಕು ಎಂದು ಮನವಿ ಮಾಡಿಕೊಂಡರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X