ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಹಂತದ ಚುನಾವಣೆ: ಮಹಿಳಾ ಸ್ವಾರಸ್ಯ

By Staff
|
Google Oneindia Kannada News

ಬೆಂಗಳೂರು, ಮೇ 9: ಶನಿವಾರ ನಡೆಯುವ ಮೊದಲ ಹಂತದ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಒಟ್ಟು 17 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಅತ್ಯಧಿಕ ಅಂದರೆ 5 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಎಸ್‌ಪಿ ತಲಾ ಇಬ್ಬಿಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ತಮಾಷೆ ಎಂದರೆ, ಈ ಎರಡು ಪಕ್ಷಗಳು ಮಹಿಳಾ ಮೀಸಲಾತಿಗಾಗಿ ಸಂಸತ್ತಿನಲ್ಲಿ ಹಾದಿ ಬೀದಿ ರಂಪ ಮಾಡಿ ಹುಯಿಲೆಬ್ಬಿಸುತ್ತಲೇ ಇರುತ್ತವೆ. ಮತ್ತೂ ವಿಚಿತ್ರ ಎಂದರೆ, ಈ ಎರಡೂ ಪಕ್ಷಗಳ ಪ್ರಧಾನ ಅಧ್ಯಕ್ಷರು ಸಹ ಮಹಿಳೆಯರೆ. ಹಾಗಿದ್ದೂ ಮಹಿಳೆಯರಿಗೆ ಮಣೆ ಹಾಕುವಲ್ಲಿ ಯಾಕೋ ಏನೋ ಹಿಂದೆ ಸರಿದಿವೆ.

ಇನ್ನು ಸಮಾಜವಾದಿ ಪಕ್ಷ ಮೂರು ಮಂದಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಹಿಳಾ ಅಭ್ಯರ್ಥಿ ಎಂದರೆ ಸಾಕು ಬೆಚ್ಚಿ ಬೀಳುವ ಜೆಡಿಎಸ್‌ನ ಎಚ್.ಡಿ.ದೇವೇಗೌಡರು ಕೇವಲ ಒಬ್ಬರಿಗೆ ಮಾತ್ರ ಟಿಕೆಟ್ ಕೊಟ್ಟಿದ್ದಾರೆ. ಮತ್ತಷ್ಟು ಸ್ವಾರಸ್ಯಕರ ಸಂಗತಿ ಎಂದರೆ, ಕಣದಲ್ಲಿರುವ ಇಬ್ಬರು ಮಹಿಳೆಯರು ಜೆಡಿಎಸ್‌ನ ಇಬ್ಬರು ದೈತ್ಯ ಅಭ್ಯರ್ಥಿಗಳಾದ ಕುಮಾರಸ್ವಾಮಿ ಮತ್ತು ರೇವಣ್ಣ ವಿರುದ್ಧ ಸೆಣೆಸಲಿದ್ದಾರೆ. ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಎಸ್.ಜಿ.ಅನುಪಮಾ(ದೇವೇಗೌಡರ ಬದ್ಧ ವೈರಿ ಪುಟ್ಟಸ್ವಾಮಿ ಗೌಡರ ಸೊಸೆ) ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಇನ್ನು ರಾಮನಗರದ ವಿಚಾರಕ್ಕೆ ಬಂದರೆ, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಹಿಳೆ ಸ್ಪರ್ಧಿಸಿದರೆ ಸೋಲು ಖಚಿತ ಎಂದು ಜ್ಯೋತಿಷ್ಯ ಹೇಳಿದ್ದೇ ತಡ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುತ್ರಿ ಮಮತಾ ನಿಚ್ಚಾನಿಗೆ ಏಣಿ ಹಾಕಿ ಕಾಂಗ್ರೆಸ್ ಕಣಕ್ಕಿಳಿಸಿತು.

ಈ ಬಾರಿಯ ಚುನಾವಣೆ ಕಣದಲ್ಲಿರುವ ಪ್ರಸಿದ್ಧ ಮಹಿಳಾ ಮಣಿ ಎಂದರೆ, ಪ್ರಮೀಳಾ ನೇಸರ್ಗಿ. ವಿಜಯನಗರ ಕ್ಷೇತ್ರದಿಂದ ಬಿಜೆಪಿ ಪ್ರಮೀಳಾ ನೇಸರ್ಗಿಯನ್ನು ಕಣಕ್ಕಿಳಿಸಿದೆ. 14.04 ಕೋಟಿ ರು.ಗಳ ಆಸ್ತಿಯ ಒಡತಿಯಾಗಿರುವ ನೇಸರ್ಗಿ ಕಾಂಗ್ರೆಸ್‌ನ ಮಮತಾ ನಿಚ್ಚಾನಿ ಅವರನ್ನು (6.24 ಕೋಟಿ ರು.ಗಳು) ಹಿಂದಿಕ್ಕಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಮಂಡ್ಯದ ಗಂಡು ಅಂಬರೀಷ್ ವಿರುದ್ಧ ಬಿಜೆಪಿಯ ಪೂಜಾ ಎಂ ಸಂತೋಷ್ ಸ್ಪರ್ಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ಒಬ್ಬೊಬ್ಬ ಮಹಿಳಾ ಅಭ್ಯರ್ಥಿ ಕ್ರಿಮಿನಲ್ ಹಿನ್ನಲೆ ಉಳ್ಳವರು ಎಂದು ದಾಖಲೆಗಳು ಹೇಳುತ್ತವೆ. ಸಿಪಿಎಂ, ಸುವರ್ಣಯುಗ ಪಕ್ಷ, ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್, ಸರ್ವೋದಯ ಕರ್ನಾಟಕ ಪಕ್ಷಗಳು ತಲಾ ಒಬ್ಬೊಬ್ಬ ಮಹಿಳಾ ಮಣಿಗಳನ್ನು ಕಣಕ್ಕಿಳಿಸಿವೆ. ಮೊದಲ ಹಂತದ ಚುನಾವಣೆಗೆ 84, 14,624 ಮಹಿಳೆಯರು ಮತಚಲಾಯಿಸಲಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X