ತುಂಗೆ ಸೇರಿದ ಸಂಗೀತ ಗಂಗಾದ ಹರಿಕಾರನ ನೆನಪು
ಬೆಂಗಳೂರು, ಏ. 29: ಸಂಗೀತಾಗಂಗಾ ಸಂಸ್ಥೆಯ ಹರಿಕಾರ ಗಾಯಕ ಜಿ.ವಿ.ಅತ್ರಿ ಅವರ ಸ್ಮರಣಾರ್ಥ ಏ.30 ರಂದು ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ " ಜಿ.ವಿ. ಅತ್ರಿ ಸವಿನೆನಪು' ಸಂಗೀತ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಗಾಯಕ ಜಿ.ವಿ. ಅತ್ರಿ ಶೃಂಗೇರಿ ಬಳಿ ತುಂಗಾ ನದಿಯಲ್ಲಿ ಸಂಸಾರ ಸಮೇತಮುಳುಗಿ ಸಾವನ್ನಪ್ಪಿದ ಕಹಿ ಘಟನೆ ನಡೆದು ನಾಳೆಗೆ 8 ವರ್ಷವಾಗಲಿದೆ.ಬೆಳಗ್ಗೆಯಿಂದ ರಾತ್ರಿಯವರೆಗೂ ವಿವಿಧ ಸಂಗೀತ ಪ್ರಕಾರದ ಮೂಲಕ ಅವರ ಸ್ಮರಣೆ ಮಾಡಲು ಸಂಗೀತಾ ಗಂಗಾ ಸಂಸ್ಥೆ ಅಣಿಯಾಗಿದೆ.
ಕಾರ್ಯಕ್ರಮಗಳ ವಿವರ:
ಬೆಳಗ್ಗೆ 10ಕ್ಕೆ ಮಾಜಿ ಸಚಿವ ಪಿ.ಜಿ.ಆರ್ .ಸಿಂಧ್ಯಾ ಅವರಿಂದ ಉದ್ಘಾಟನೆ. ಕವಿ. ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಅಧ್ಯಕ್ಷತೆ. ದೂರದರ್ಶನ ನಿರ್ದೇಶಕ ಮಹೇಶ್ ಜೋಶಿ ಅವರು ಮುಖ್ಯ ಅತಿಥಿ.
ಬೆಳಗ್ಗೆ 11:30 ಕ್ಕೆ ಕವಿ ಎಂ.ಎನ್. ವ್ಯಾಸರಾವ್, ಸಂಗೀತ ನಿರ್ದೇಶಕಿ ಜಯಶ್ರೀ ಅರವಿಂದ್ ಅವರ ಉಪಸ್ಥಿತಿಯಲ್ಲಿ ಗೀತಗಾಯನ.
ಭಾವಗೀತೆಗಳನ್ನು ಹಾಡುವವರು: ಶಿವಮೊಗ್ಗ ಸುಬ್ಬಣ್ಣ, ನರಸಿಂಹನಾಯಕ್,ಕಿಕ್ಕೇರಿ ಕೃಷ್ಣಮೂರ್ತಿ, ಸುರೇಖಾ, ಅರ್ಚನಾ ಉಡುಪ ಮತ್ತಿತ್ತರು.
ಮಧ್ಯಾಹ್ನ 1ಕ್ಕೆ ವೀಣಾ ವಾರುಣಿ ಅವರಿಂದ ವೀಣಾ ವಾದನ.
ಸಂಜೆ 4 ಕ್ಕೆ ಕನಕಗಿರಿ ಹುಸೇನ್ ಸಾಬ್, ರವೀಂದ್ರ ಸೊರಗಾವಿ, ಅಜಯ್ ವಾರಿಯರ್, ವಿಮಲಾ ಮೂರ್ತಿಯವರಿಂದ ದಾಸರಪದಗಳು.
ಸಂಜೆ 5 ಕ್ಕೆ 'ಸ್ವರಭಾವ' ಕಾರ್ಯಕ್ರಮ: ಕಲಾವಿದರು:ವಸಂತ ಕನಕಾಪುರ್, ಎನ್.ಎಸ್ .ಪ್ರಸಾದ್, ಪ್ರವೀಣ್ .ಡಿ.ರಾವ್.
ಸಂಜೆ 6ಕ್ಕೆ ಅಪ್ಪಗೆರೆ ತಿಮ್ಮರಾಜು, ಡಾ. ವೇಮಗಲ್ ನಾರಾಯಣ ಸ್ವಾಮಿ ಅವರಿಂದ ಜಾನಪದ ಗೀತಗಾಯನ. ಗಾಯಕಿ ಬಿ.ಕೆ.ಸುಮಿತ್ರಾ ಮುಖ್ಯ ಅತಿಥಿಗಳಾಗಿರುತ್ತಾರೆ. ನಂತರ ಸಂಗೀತಾ ಗಂಗಾ ಕಲಾವಿದರಿಂದ ನೃತ್ಯ.
ಸಂಜೆ 7 ಕ್ಕೆ ಹಿರೇಮಗಳೂರು ಕಣ್ಣನ್ ಅವರ ಸಾರಥ್ಯದಲ್ಲಿ ಗೀತ ಸಂಗೀತ ಕಾರ್ಯಕ್ರಮ. ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಯಶವಂತ ಹಳಬಂಡಿ, ಎಸ್. ಬಾಲಿ, ಆನಂದ ಮಾದಲಗೆರೆ, ಕೇಶವ್ ,ಕಸ್ತೂರಿ ಶಂಕರ್, ಚಂದ್ರಿಕಾ ಗುರುರಾಜ್, ಸಂಗೀತಾ ಕುಲಕರ್ಣಿ(ಕಟ್ಟಿ) ಹೇಮಾ ಪ್ರಸಾದ್ ಹಾಗೂ ಸುಮಾ ಅವರಿಂದ ಗಾಯನವಿರುತ್ತದೆ.
ನಾಡಿನಾದ್ಯಂತವಿರುವ ಜಿ.ವಿ.ಅತ್ರಿ ಅವರ ಅಭಿಮಾನಿಗಳು, ಸಂಗೀತಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಸಂಗೀತಾ ಗಂಗಾದ ರುವಾರಿ ಶ್ರೀಮತಿ ಹೇಮಾ ಪ್ರಸಾದ್ ಅವರು ಕೇಳಿಕೊಂಡಿದ್ದಾರೆ.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications