ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಲಿ ಚಿತ್ರ ವೀಕ್ಷಣೆ ಅಪರಾಧವಲ್ಲ : ಕೋರ್ಟ್

By Staff
|
Google Oneindia Kannada News

ಬೆಂಗಳೂರು, ಏ. 9 : ಪೋಲಿ ಚಲನಚಿತ್ರಗಳನ್ನು ಖಾಸಗಿಯಾಗಿ ನೋಡುವುದು ಅಪರಾಧವಲ್ಲ ಎಂದು ಕರ್ನಾಟಕ ಉಚ್ಛನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವೈಯಕ್ತಿಕ ಅಭಿರುಚಿಯಿಂದ ತಮ್ಮ ಪಾಡಿಗೆ ತಾವು xxx ಸಿನಿಮಾ ತುಣುಕುಗಳನ್ನು ವೀಕ್ಷಿಸುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧವೆನಿಸದು ಎಂದು ಕೋರ್ಟ್ ಹೇಳಿದೆ.ಕಳೆದ ಸೋಮವಾರ ನ್ಯಾಯಾಲಯದ ಮುಂದೆ ಬಂದ ಒಂದು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಈ ರೀತಿಯಾಗಿ ಅಭಿಪ್ರಾಯಪಟ್ಟರು. ಪ್ರಕರಣದ ವಿವರ ಹೀಗಿದೆ :

ಬೆಂಗಳೂರಿನ ಆಚಾರ್ಯ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ದೀಪಂಕರ್ ಚೌಧರಿ, ಸುಬಜಿತ್ ಚೌದರಿ ಮತ್ತು ಪ್ರೀತಂ ದಾಸ್ ಎಂಬುವವರು ಎಂಇಐ ಲೇಔಟಿನಲ್ಲಿ ತಾವು ಬಾಡಿಗೆಗೆ ಪಡೆದಿರುವ ಕೋಣೆಯಲ್ಲಿ ಒಂದು ದಿವಸ ಕಂಪ್ಯೂಟರ್ ನಲ್ಲಿ ಪೋಲಿ ಚಿತ್ರಗಳನ್ನು ನೋಡುತ್ತಾ ಇದ್ದರು. ಅದನ್ನು "ಕಂಡುಹಿಡಿದ" ಪೀಣ್ಯ ಪೋಲೀಸರು ಅಪರಾಧಿಗಳನ್ನು ಬಂಧಿಸಿ ಅವರ ವಿರುದ್ದ ಮೊಕದ್ದಮೆ ದಾಖಲಿಸಿದ್ದರು. ಈ ಘಟನೆ ನಡೆದದ್ದು 2005ರ ನವೆಂಬರ್ 30 ರಂದು.

"ಪೋಲಿ ಚಿತ್ರ ವೀಕ್ಷಣೆಯ" ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ 7ನೆ ಅಡಿಷನಲ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಆಜ್ಞಾಪಿಸಿದ್ದರು. ಆದರೆ, ಈ ಮೊಕದ್ದಮೆ ಸಲ್ಲದೆಂದು ವಾದಿಸಿ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿದಾವೆ ಹೂಡಿದ್ದರು.

ವಿದ್ಯಾರ್ಥಿಗಳು ವಿವಾದಿತ ಪೋಲಿ ಚಿತ್ರಗಳನ್ನು ಕಾಂಪ್ಯಾಕ್ಟ್ ಡಿಸ್ಕ್ ಗಳಲ್ಲಿ ಶೇಖರಿಸಿದ್ದು ಮಾರಾಟ, ಪ್ರಸರಣ ಅಥವಾ ಹಂಚುವ ಉದ್ದೇಶದಿಂದಲ್ಲ. ಅದು ಅವರ ಖಾಸಗಿ ಬಳಕೆಗಾಗಿ ಮಾತ್ರ ಎಂದು ಹೇಳಿದ ನ್ಯಾಯಾಲಯ ವಿದ್ಯಾರ್ಥಿಗಳ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸಿತು.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X