ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳರ ಪ್ರತಿಭಟನೆಗೆ ರಜನಿ, ಕಮಲ್ ಸೇರ್ಪಡೆ

By Staff
|
Google Oneindia Kannada News

Kamal and Rajini to join protest against Karnatakaಚೆನ್ನೈ, ಏ. 3 : ತಮಿಳುನಾಡು ಸರಕಾರದ ಹೊಗೇನಕಲ್ ಕುಡಿಯುವ ನೀರಿನ ಯೋಜನೆ ವಿರುದ್ಧ ಕರ್ನಾಟಕ ತಳೆದಿರುವ ನಿಲುವುಗಳ ವಿರುದ್ಧ ತಮಿಳು ಚಿತ್ರರಂಗದ ನಾನಾ ಘಟಕಗಳು ನಾಳೆ (ಏ. 4) ಗುರುವಾರ ಇಲ್ಲಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸುತ್ತಿದ್ದಾರೆ.

ಚಿತ್ರರಂಗದ ಸತ್ಯಾಗ್ರಹ ಸುತ್ತೋಲೆಯನ್ನು ಗಮನಿಸಿದ ತತ್ ಕ್ಷಣ ರಜನಿ ಹೈದರಾಬಾದಿನಲ್ಲಿ ತಡೆಯುತ್ತಿರುವ "ಕುಸೇಲನ್" ಚಿತ್ರೀಕರಣವನ್ನು ನಿಲ್ಲಿಸಿ ತಂಡದ ಸಮೇತ ಚೆನ್ನೈಗೆ ಆಗಮಿಸಿದರು. ಪ್ರತಿಭಟನೆ ವ್ಯವಸ್ಥೆ ಮಾಡಿರುವ ಮುಂದಾಳುಗಳನ್ನು ಫೋನ್ ಮೂಲಕ ಸಂಪರ್ಕಿಸಿ ತಾವು ಸತ್ಯಾಗ್ರಹ ಸ್ಥಳಕ್ಕೆ ಬರುತ್ತಿರುವುದಾಗಿ ಹೇಳಿದರು.

ನಡಿಗರ ಸಂಘಂನ ಕಾರ್ಯದರ್ಶಿ ರಾಧಾ ರವಿ ಪ್ರಕಾರ ರಜನಿ ಫೋನ್ ಮೂಲಕ ಸತ್ಯಾಗ್ರಹದ ವ್ಯವಸ್ಥೆಗಳ ಬಗೆಗೆ ವಿಚಾರಿಸಿದರಲ್ಲದೆ, ತಾವು ಎಷ್ಟು ಹೊತ್ತಿಗೆ ಎಲ್ಲಿಗೆ ಬರಬೇಕು ಎಂದು ಕೇಳಿಕೊಂಡರು.(ಎತ್ತಣಿ ಮಣಿಕ್ಕು ವರಣಮ್ ನು ಸೊಲ್ಲಪ್ಪ, ಶಾರ್ಪ್ ವಂದುರರೇನ್).

ಇನ್ನೊಬ್ಬ ಸೂಪರ್ ಸ್ಟಾರ್ ಕಮಲ್ ಹಾಸನ್ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೂ ಸೆಟ್ಟೇರಲಿರುವ ಅವರ "ಮರ್ಮಯೋಗಿ" ಚಿತ್ರಿಕರಣದ ಏರ್ಪಾಡುಗಳನ್ನು ಅವರು ಅವೆರಿಕಾದಲ್ಲಿ ಮಾಡುತ್ತಿದ್ದಾರೆ. ಅಮೆರಿಕಾದಿಂದ ದಡಬಡನೆ ಅವರು ಹಾರಿಬರಲಿದ್ದು ಪ್ರತಿಭಟನಾ ಸ್ಥಳಕ್ಕೆ ಗುರುವಾರ ಮಧ್ಯಾನ್ಹ ತಲುಪುವರು.

ತಮಿಳು ಚಿತ್ರರಂಗದ ಸುಮಾರು 10,000 ಮಂದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವರೆಂದು ನಿರೀಕ್ಷಿಸಲಾಗಿದೆ. ಉಪವಾಸ ಸತ್ಯಾಗ್ರಹಕ್ಕೆ ಚಿಪಾಕ್ ಗೆಸ್ಟ್ ಹೌಸ್ ಬಳಿ ಸ್ಥಳ ನಿಗದಿ ಮಾಡಲಾಗಿದೆ ಎಂದು ಚೆನ್ನೈ ಪೊಲೀಸ್ ಕಮಿಷನರ್ ನಾಂಜಿಲ್ ಕುಮರನ್ ದಟ್ಸ್ ಕನ್ನಡಕ್ಕೆ ಬುಧವಾರ ಮಧ್ಯಾನ್ಹ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಹೊಗೇನಕಲ್ : ಕನ್ನಡದ ಮಕ್ಕಳೆಲ್ಲ ಒಂದಾಗಬನ್ನಿ
ಬಂದ್‌ಗೆ ಕನ್ನಡ ಚಿತ್ರೋದ್ಯಮದ ಪೂರ್ಣಬೆಂ'ಬಲ'
ಸೂಪರ್ ಸ್ಟಾರ್ ರಜನಿಗೆ ಸಿಇಟಿ ಪರೀಕ್ಷೆ
ತಮಿಳುನಾಡಿನಲ್ಲಿ ಕನ್ನಡ ಚಾನೆಲ್‌ ಪ್ರಸಾರ ಬಂದ್
ಹೊಗೇನಕಲ್ ಯೋಜನೆ ವಿರುದ್ಧ ಕರ್ನಾಟಕ ಬಂದ್
ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X