ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾದಂಬರಿ ಸಾರ್ವಭೌಮರನ್ನು ನೆನಯಲ್ಲೊಂದು ದಿನ

By Staff
|
Google Oneindia Kannada News

ಫೆ.19 ಅನಕೃ ಜನ್ಮಶತಮಾನೋತ್ಸವಬೆಂಗಳೂರು, ಫೆ.17: ಕನ್ನಡ ಸಾಹಿತ್ಯಲೋಕದಲ್ಲಿ 'ಕಾದಂಬರಿ ಸಾರ್ವಭೌಮ' ಎಂದು ಹೆಸರಾದ ಅರಕಲಗೂಡು ನರಸಿಂಗರಾಯ ಕೃಷ್ಣರಾಯ(ಅನಕೃ) ಅವರ ಜನ್ಮ ಶತಮಾನೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಫೆ.19ರಂದು ನಗರದಲ್ಲಿ ಆಯೋಜಿಸಿದೆ.

ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ, ಕರ್ನಾಟಕವನ್ನು ಕಟ್ಟಲು ಶ್ರಮಿಸಿದ ಹಾಗೂ 250 ಕೃತಿಗಳನ್ನು ರಚಿಸಿರುವ ಅ.ನ. ಕೃಷ್ಣರಾವ್ ಶತಮಾನೋತ್ಸವದ ಅಂಗವಾಗಿ ಅವರ ಕೃತಿಗಳ ಕುರಿತು ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ ಮತ್ತು ಸ್ಥಿರಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಅನಕೃ ಕುರಿತ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅನಕೃ ಅವರ ಅಪರೂಪದ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಅನಕೃ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಅಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಉದ್ಘಾಟಿಸುವರು. ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಅನಕೃ ಪ್ರತಿಷ್ಠಾನದ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ ಅತಿಥಿಗಳಾಗಿ ಭಾಗವಹಿಸುವರು.

ಮಧ್ಯಾಹ್ನ 12:30ಕ್ಕೆ ಅನಕೃ ಕುರಿತು ವಿಚಾರ ಸಂಕಿರಣ ನಡೆಯಲಿದೆ. ವಿಚಾರ ಸಂಕಿರಣವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಉದ್ಘಾಟಿಸುವರು. ಕೆ.ವಿ. ನಾರಾಯಣ ಅಧ್ಯಕ್ಷತೆ ವಹಿಸುವರು. ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಡಾ. ಬಸವರಾಜ ಕಲ್ಗುಡಿಯವರು ಅನಕೃ ಸಾಹಿತ್ಯದಲ್ಲಿ ಮೌಲ್ಯವಿನ್ಯಾಸ' ಕುರಿತು, ಡಾ. ಬಂಜಗೆರೆ ಜಯಪ್ರಕಾಶ್ ಅವರು ಅನಕೃ ಕಾದಂಬರಿಗಳಲ್ಲಿ ಚಾರಿತ್ರಿಕ ವಸ್ತುವಿನ್ಯಾಸ' ಕುರಿತು ಮಾತನಾಡುವರು.

ಮಧ್ಯಾಹ್ನ 3ಕ್ಕೆ ನಡೆಯುವ 2ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಸಿ.ಎನ್. ರಾಮಚಂದ್ರನ್ ವಹಿಸುವರು. ಡಾ. ಎಲ್.ಜಿ. ಮೀರಾ ಅವರು ಅನಕೃ ಮತ್ತು ಕನ್ನಡ ಸಾಂಸ್ಕೃತಿಕ ನೆಲೆ' ಬಗ್ಗೆ ಹಾಗೂ ರಾಮಚಂದ್ರಶರ್ಮ ತ್ಯಾಗಲಿಯವರು ಅನಕೃ ಮತ್ತು ಪ್ರಗತಿಶೀಲ ಚಳವಳಿ' ಬಗ್ಗೆ ಮಾತನಾಡುವರು. ಸಂಜೆ 4:30ಕ್ಕೆ ಸಮಾರೋಪ. ಜ್ಞಾನಪೀಠ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಸಮಾರೋಪ ಭಾಷಣ ಮಾಡುವರು. ಪ್ರೊ. ಜಿ. ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸುವರು.

ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-02.

(ದಟ್ಸ್ ಕನ್ನಡವಾರ್ತೆ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X