ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಕಡಲ ಕಿನಾರೆ ಗಾಳಿಪಟ ಹಾರಿಸಲು ರೆಡಿ

By Staff
|
Google Oneindia Kannada News

ಮಂಗಳೂರು, ಜ.02: ಟೀಂ ಮಂಗಳೂರು ತಂಡ ಪಣಂಬೂರು ಕಡಲ ಕಿನಾರೆಯಲ್ಲಿ ಜ.19 ಮತ್ತು ಜ.20 ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸಿದೆ.

ಮಂಗಳವಾರ (ಡಿ.02) ರಂದು ಗಾಳಿಪಟ ಉತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಮಹೇಶ್ವರ್ ರಾವ್, ಈಗಾಗಲೇ ನಡೆಯುತ್ತಿರುವ ಕರಾವಳಿ ಉತ್ಸವದ ಜತೆಗೆ ಈ ಉತ್ಸವ ಸೇರಿಕೊಳ್ಳುತ್ತಿರುವುದು ಈ ಬಾರಿಯ ವಿಶೇಷ. ಜಾಗತಿಕ ತಾಪಮಾನ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸುವುದು ಈ ಬಾರಿಯ ಉತ್ಸವದ ಮುಖ್ಯ ಉದ್ದೇಶವಾಗಲಿದೆ ಎಂದು ಹೇಳಿದರು.

ಇತರೆ ದೇಶಗಳಿಂದ ಬರುತ್ತಿರುವ ಪ್ರತಿಕ್ರಿಯೆಯಿಂದ ಸಂತೋಷಗೊಂಡಿರುವ ಉತ್ಸವದ ಸಂಯೋಜಕ ಗಿರಿಧರ್ ಕಾಮತ್ , ಈ ಬಾರಿ ಉತ್ಸವದಲ್ಲಿ ಹಾಲೆಂಡ್, ಜರ್ಮನಿ, ಇಟಲಿ, ಇಂಡೋನೇಷ್ಯಾ, ಥಾಯ್ಲೆಂಡ್, ಅಮೆರಿಕ, ಫ್ರಾನ್ಸ್, ಆಸ್ಟ್ರೇಲಿಯಾ ಹಾಗೂ ಯುರೋಪಿನ ಮುಖ್ಯ ದೇಶಗಳ ಅನೇಕ ತಂಡಗಳು ಪಾಲ್ಗೊಳ್ಳಲಿವೆ. ಭಾರತದ ಐದು ರಾಜ್ಯಗಳ ತಂಡಗಳು ಕೂಡ ಇದರಲ್ಲಿ ಸೇರಿದೆ ಎಂದು ಹೇಳಿದರು.

ಈ ಬಾರಿಯ ಲಾಂಛನದಲ್ಲಿ ಐದು ಗಾಳಿಪಟಗಳು ಭೂಮಿ, ನೀರು, ಬೆಂಕಿ, ಗಾಳಿ, ಸ್ಥಳಾವಕಾಶ ಹಾಗೂ ಕಪ್ಪು ಬಣ್ಣದ ಗಾಳಿಪಟ ಮಾನವನ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಗಾಳಿಪಟ ಎಷ್ಟೇ ಮೇಲೇರಿದರೂ ನಿಯಂತ್ರಣ ಸಾಧಿಸುವುದು ದಾರದ ಆಧಾರದಲ್ಲಿ ನೆಲದ ಮೇಲೇಯೇ ಎಂಬುದನ್ನು ಈ ಲಾಂಛನ ಪ್ರತಿನಿಧಿಸುತ್ತದೆ ಎಂದು ಗಿರಿಧರ್ ಕಾಮತ್ ಹೇಳಿದರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: http://www.indiankites.com/index.html

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X