ಬಿಗಿ ಭದ್ರತೆ ನಡುವೆ ಗುಜರಾತಿನಲ್ಲಿ ಮತದಾನ ಆರಂಭ
ರಾಜಕೋಟ್, ಡಿ.11 : ಗುಜರಾತ್ ವಿಧಾನಸಭಾ ಚುನಾವಣೆ ಈ ಸಲ ದೇಶದ ಗಮನ ಸೆಳೆದಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಮೋಡಿ ಮಾಡುವರೇ ಎಂಬ ಕುತೂಹಲ ಎಲ್ಲರದು. ಮೊದಲ ಹಂತದಲ್ಲಿ 87ಸ್ಥಾನಗಳಿಗೆ ಮಂಗಳವಾರ ಬೆಳಗ್ಗೆ 8ಗಂಟೆಯಿಂದ ಮತದಾನ ಆರಂಭವಾಗಿದೆ.
ಮಧ್ಯಾಹ್ನದ ವರದಿಗಳ ಪ್ರಕಾರ, ಮತದಾನ ಶಾಂತಿಯುತವಾಗಿ ಮುಂದುವರೆದಿದೆ. ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನದ ಹಿನ್ನೆಲೆಯಲ್ಲಿ ವ್ಯಾಪಕ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಸೌರಾಷ್ಟ್ರ, ಕಛ್, ದಕ್ಷಿಣ ಗುಜರಾತಿನ ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ.
93,14,640 ಪುರುಷರು, 85,63,131 ಮಹಿಳೆಯರು ಸೇರಿದಂತೆ 1,78,77,771 ಮತದಾರರು, 669ಅಭ್ಯರ್ಥಿಗಳ ಹಣೆ ಬರಹ ಬರೆಯುತ್ತಿದ್ದಾರೆ.
ಗುಜರಾತಿನ ಅಭಿವೃದ್ಧಿಯನ್ನು ಬಿಂಬಿಸಿ ನರೇಂದ್ರ ಮೋದಿ ಮತದಾರರ ಮುಂದೆ ನಿಂತಿದ್ದು, ತಮ್ಮ ಮತ್ತು ಸರ್ಕಾರದ ಕಾರ್ಯಕ್ರಮಗಳ ವರ್ಚಸ್ಸಿನಿಂದಲೇ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ ಅವರಲ್ಲಿದೆ.
(ಏಜನ್ಸೀಸ್)


Click it and Unblock the Notifications
