ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನವರ್ಷ ರಸ್ತೆಗಿಳಿಯಲಿದೆ 1ಲಕ್ಷ ರೂಪಾಯಿಯ ಕಾರು!

By Staff
|
Google Oneindia Kannada News

ಮೈಸೂರು, ನ.24 : ಮಧ್ಯಮವರ್ಗದವರ ಕಾರಿನ ಕನಸು ನನಸಾಗುವ ದಿನಗಳು ಹತ್ತಿರದಲ್ಲಿಯೇ ಇವೆ. ಒಂದು ಲಕ್ಷ ರೂಪಾಯಿಗಳಿಗೆ ಕಾರು ನೀಡುವ ಟಾಟಾ ಮೋಟರ್ಸ್ ಲಿಮಿಟೆಡ್ ಯೋಜನೆ ಅಂತಿಮ ರೂಪಕ್ಕೆ ಬಂದಿದೆ.

ಈ ಬಗ್ಗೆ ಸುದ್ದಿಗಾರರಿಗೆ ಟಾಟಾ ಮೋಟರ್ಸ್ ಲಿಮಿಟೆಡ್ ನ ಸಹಾಯಕ ವ್ಯವಸ್ಥಾಪಕಿ ದೀಪಾ ಅಸ್ತನಾ ಮಾಹಿತಿ ನೀಡಿದ್ದಾರೆ. 2008ರ ಮಧ್ಯ ಭಾಗದಲ್ಲಿ ಲಕ್ಷ ರೂಪಾಯಿಯ ಕಾರು ರಸ್ತೆಗಿಳಿಯಲಿದೆ. ಈ ಕಾರಿನ ಮಾದರಿ ಸಿದ್ಧಗೊಂಡಿದ್ದು, 2008ರ ಜನವರಿಯಲ್ಲಿ ನವದೆಹಲಿಯಲ್ಲಿ ಪ್ರದರ್ಶನಕ್ಕಿಡುವುದಾಗಿ ಅವರು ಹೇಳಿದರು.

ದ್ವಿಚಕ್ರ ವಾಹನ ಹೊಂದಿದ ಪ್ರತಿಯೊಬ್ಬರ ಮನಸ್ಸಲ್ಲೂ ಕಾರು ಕೊಳ್ಳುವ ಕನಸಿದೆ. ಈ ಕನಸಿಗೆ ಟಾಟಾ ಪುಷ್ಠಿ ನೀಡಲಿದೆ. ಪ್ರಪಂಚದಲ್ಲಿಯೇ ಅತಿ ಕಡಿಮೆ ಬೆಲೆಗೆ ಕಾರನ್ನು ನಾವು ನೀಡಲಿದ್ದೇವೆ ಎಂದು ದೀಪಾ ಹೇಳಿದರು. ಒಂದು ಲಕ್ಷ ರೂಪಾಯಿಗೆ ಗುಣಮಟ್ಟದ ಕಾರು ನೀಡಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಕಾರು ಉತ್ಪಾದನಾ ಸಂಸ್ಥೆಯೊಂದು ಹೇಳಿಕೆ ನೀಡಿದೆ. ಈ ಬಗ್ಗೆ ದೀಪಾ ಪ್ರತಿಕ್ರಿಯೆ ನೀಡಲಿಲ್ಲ.

(ದಟ್ಸ್ ಕನ್ನಡ ವಾರ್ತೆ)

ಇನ್ನೊಂದು ಕಾರಿನ ಸುದ್ದಿ :
2008 : ಭಾರತದ ರಸ್ತೆಗಳಲ್ಲಿ ಜಲಜನಕದ ಕಾರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X