ಹೃದಯಾಘಾತದಿಂದಾಗಿ ಸುಂದರಲಾಲ್ ಬಹುಗುಣ ಆಸ್ಪತ್ರೆಗೆ
ಡೆಹ್ರಾಡೂನ್ , ನ.14 : ಹೆಸರಾಂತ ಪರಿಸರವಾದಿ ಸುಂದರಲಾಲ್ ಬಹುಗುಣ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ದೇಹ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ಬುಧವಾರ(ನ.14) ತಿಳಿಸಿದ್ದಾರೆ.
ಮಂಗಳವಾರ ಹೃದಯಾಘಾತಕ್ಕೆ ಒಳಗಾದ ಬಹುಗುಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಮುಂದುವರೆದಿದೆ. ಚಿಪ್ಕೋ ಚಳವಳಿ ಮುಖಾಂತರ ಸಂಚಲನ ಸೃಷ್ಟಿಸಿದ್ದ ಬಹುಗುಣ,ದೇಶದಲ್ಲಿ ಪರಿಸರ ಜಾಗೃತಿ ಮೂಡಿಸಲು ಶ್ರಮಿಸಿದವರು. ಜೀವನವನ್ನು ಪರಿಸರ ಹೋರಾಟಗಳಲ್ಲಿಯೇ ಸವೆಸಿದವರು.
ಗಂಗಾ ಮತ್ತು ಕಾವೇರಿ ನದಿ ಬೆಸೆಯುವ ಯೋಜನೆ ಬಗ್ಗೆ ಅವರು ಹಿಂದೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಯೋಜನೆ ಮೂರ್ಖತನದ ಪರಿಮಾವಧಿ ಎಂದು ಅವರು ಅಭಿಪ್ರಾಯಪಟ್ಟಿದ್ದರು.
(ಏಜನ್ಸೀಸ್)












Click it and Unblock the Notifications