ಹತ್ತು ದಿಕ್ಕು ನೂರು ದನಿ : ಶುಕ್ರವಾರದ ಸುದ್ದಿ ಬಿಂಬ

1. ರಾಜಕೀಯ ಬಿಕ್ಕಟ್ಟು ಕೊನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ನವದೆಹಲಿಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಬಿಕ್ಕಟ್ಟು ಪ್ರಸ್ತಾಪವಾಗಲಿಲ್ಲ.

2. ಮುಂದೆ ಏನು ಮಾಡಬೇಕು ಎಂಬ ಶಿಫಾರಸು ಒಳಗೊಂಡ ರಾಜ್ಯಪಾಲರ ವರದಿಯನ್ನು ಕೇಂದ್ರ ಎದುರು ನೋಡುತ್ತಿದೆ. ಈ ಮಧ್ಯೆ ವಿಧಾನ ಸಭಾಧ್ಯಕ್ಷ ಕೃಷ್ಣ ರಾಜ್ಯಪಾಲರನ್ನು ಇಂದು ರಾತ್ರಿ ಭೇಟಿ ಮಾಡಲಿದ್ದಾರೆ.

3. ಶಾರುಖ್ ಖಾನ್ ಇಂದು 42ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡರು.

4. ಮತ್ತೆ ಮೌನಕ್ಕೆ ಮೊರೆ ಹೋದ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ಯಾವುದೇ ಹೇಳಿಕೆ ನೀಡದಿರಲು ನಿರ್ಧರಿಸಿದ್ದಾರೆ. ದೇವೇಗೌಡರ ಷರತ್ತು ಮತ್ತು ರಾಜಕಾರಣ ಮುಂದೇನು ಎಂಬ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಶುಕ್ರವಾರ ಹೇಳಿದ್ದಾರೆ.

5. ದೆಹಲಿಗೆ ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಿಯೋಗ ಭೇಟಿ.

6. ಶನಿವಾರದಿಂದ ಹಂಪಿ ಉತ್ಸವ ಆರಂಭ.

7. ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಒತ್ತಾಯಿಸಿ ಶಿವಮೊಗ್ಗ, ಮೈಸೂರು, ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ.

8. ಜಾಮೀನು ಅರ್ಜಿಯನ್ನು ವಿಚಾರಣೆಗೆ ನ.20ರಂದು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ನಟ ಸಂಜಯ್ ದತ್ ಜೈಲಿನಲ್ಲಿಯೇ ದೀಪಾವಳಿ ಆಚರಿಸುವುದು ಅನಿವಾರ್ಯವಾಗಿದೆ.

9. ಶುಕ್ರವಾರವೂ ರಾಜ್ಯಪಾಲರ ಜನತಾದರ್ಶನ ಮುಂದುವರಿಕೆ. ರಾಜ್ಯಪಾಲರ ಸ್ಥಾನ ನೀಡುವಂತೆ ನಿವೃತ್ತ ಶಿಕ್ಷಕರೊಬ್ಬರು ಮನವಿ ಸಲ್ಲಿಸಿ, ಒಂದಿಷ್ಟು ಸಮಯ ಅಚ್ಚರಿಗೆ ಕಾರಣರಾದರು.

10. ಹಾಸ್ಯ ನಟ ದಿ.ಟಿ.ಎನ್.ಬಾಲಕೃಷ್ಣ ಅವರ ಜನ್ಮದಿನ. ಅವರ ನೆನಪು ಚಿತ್ರರಂಗಕ್ಕಿಲ್ಲ.

(ದಟ್ಸ್ ಕನ್ನಡ ಸುದ್ದಿಮನೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+