ಸೋನಿಯಾಗೆ ಶ್ರದ್ಧಾಂಜಲಿ ಅರ್ಪಿಸಿದ ಜಾರ್ಖಂಡ್ ಸಿಎಂ!
ರಾಂಚಿ, ನ.02: ಕಾಂಗ್ರೆಸ್ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಸೋನಿಯಾ ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸಿದ ಘಟನೆ ವರದಿಯಾಗಿದೆ. 'ದಿವಂಗತ ಸೋನಿಯಾ ಗಾಂಧಿ" ಎಂದು ಸಂಬೋಧಿಸುವ ಮೂಲಕ ಜಾರ್ಖಂಡ್‌ನ ಮುಖ್ಯಮಂತ್ರಿ ಮಧು ಕೋರಾ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 23ನೇ ಪುಣ್ಯತಿಥಿ ಸಮಾರಂಭದಲ್ಲಿ, '1984ರ ಅ.31ರಂದು ಸೋನಿಯಾ ಗಾಂಧಿ ದೇಹಕ್ಕೆ ಗುಂಡೇಟು ಬಿತ್ತು. ಅವರು ದೇಶಕ್ಕೆ ತಮ್ಮ ಪ್ರಾಣವನ್ನು ಅರ್ಪಿಸಿದರು. ದಿವಂಗತ ಸೋನಿಯಾ ಹಾಕಿಕೊಟ್ಟ ಪರಂಪರೆ ಅವರು ನಡೆದ ಹಾದಿಯನ್ನು ನಾವೆಲ್ಲರೂ ಅನುಸರಿಸಬೇಕು...' ಹೀಗೇ ಮುಂದುವರಿದಿತ್ತು ಅವರ ಭಾಷಣ.
ಆದರೆ ಏನೋ ಎಡವಟ್ಟಾಗಿದೆ ಎಂದು ಗ್ರಹಿಸಿದ ಕಾಂಗ್ರೆಸ್ ನಾಯಕರು ಕೂಡಲೇ ಎಚ್ಚೆತ್ತುಕೊಂಡರು. ತಪ್ಪನ್ನು ಸರಿಪಡಿಸಿದರು. ಸ್ವಲ್ಪ ಗೊಂದಲಕ್ಕೀಡಾಗಿ ಇಂದಿರಾ ಹೆಸರಿನ ಬದಲು ಸೋನಿಯಾ ಎಂದು ಕೋರಾ ಬಳಸಿದ್ದಾರೆ. ಇದು ಆಕಸ್ಮಿಕ, ಉದ್ದೇಶಪೂರ್ವಕವಲ್ಲ ಎಂದು ತೇಪೆ ಹಚ್ಚಲು ಪ್ರಯತ್ನಿಸಿ, ಆದ ತಪ್ಪಿನ ಬಗ್ಗೆ ವಿಷಾದಿಸಿದರು. ಇದು ಅಕ್ಷಮ್ಯ ಅಪರಾಧ ಎಂದು ಟೀಕಿಸಿರುವ ಬಿಜೆಪಿ, ಮಧು ಕೋರಾ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.
(ಏಜನ್ಸೀಸ್)












Click it and Unblock the Notifications