ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಬೂ ಸವಾರಿ ಬಹಿಷ್ಕರಿಸುವುದಾಗಿ ಕಲಾವಿದರ ಬೆದರಿಕೆ

By Staff
|
Google Oneindia Kannada News

ಮೈಸೂರು, ಅ.18 : ದಸರಾ ಉತ್ಸವಕ್ಕೆ ಆಗಮಿಸಿರುವ ಕಲಾವಿದರನ್ನು ಗೌರವದಿಂದ ನೋಡಿಕೊಳ್ಳುತ್ತಿಲ್ಲ. ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಲಾವಿದರು ಬೆದರಿಕೆವೊಡ್ಡಿದ್ದಾರೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ ಅನೇಕ ಕಲಾವಿದರು ಪಾಲ್ಗೊಳ್ಳುತ್ತಾರೆ. ವಿವಿಧ ವಸ್ತ್ರಗಳ ತೊಟ್ಟು, ಮೆರವಣಿಗೆಗೆ ಕಳೆ ತರುತ್ತಾರೆ. ತಮ್ಮ ಕಲೆ ಪ್ರದರ್ಶಿಸಿ, ದಸರಾ ಮೆರವಣಿಗೆಗೆ ರಂಗು ಮೂಡಿಸುತ್ತಾರೆ. ಆದರೆ ಕಲಾವಿದರಿಗೆ ನೀಡಲಾಗುತ್ತಿರುವ ಗೌರವ ಧನ ಅತಿ ಕಡಿಮೆಯಾಗಿದೆ ಎಂಬುದು ಎಲ್ಲೆಡೆ ಕೇಳಿ ಬರುತ್ತಿರುವ ದೂರು.

ಪ್ರೊ.ಲಿಂಗದೇವರಾಜ್ ಹಳೇಮನೆ ಅವರು ಹೇಳುವ ಪ್ರಕಾರ; ಇಲ್ಲಿಗೆ ಆಗಮಿಸಿರುವ ಕಲಾವಿದರಿಗೆ ಸೌಕರ್ಯಗಳನ್ನು ಒದಗಿಸಿಲ್ಲ. ಊಟ ತಿಂಡಿಗೆ ಕಲಾವಿದರೇ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ದಿನಕ್ಕೆ ಗೌರವ ಧನದ ರೂಪದಲ್ಲಿ ಸಿಗುತ್ತಿರುವ 100ರೂಪಾಯಿ ಯಾತಕ್ಕೂ ಸಾಲದಾಗಿದೆ. ಪೂರಕ ವಸ್ತ್ರಗಳನ್ನು ಸಹಾ ಪೂರೈಸಿಲ್ಲ.

ಜಂಬೂ ಸವಾರಿಗೆ ಮುನ್ನಾ ದಿನವಾದ ಅ.20ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಕಲಾವಿದರು ಹೇಳಿದ್ದಾರೆ.

ಇದೀಗ ಬಂದ ಸುದ್ದಿ : ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬ ಜನಪದ ಕಲಾವಿದರಿಗೆ ನೀಡಲಾಗುತ್ತಿರುವ ಸಂಭಾವನೆಯನ್ನು 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾಯದರ್ಶಿ ಐ. ಎಂ. ವಿಠ್ಠಲಮೂರ್ತಿ ಗುರುವಾರ ತಿಳಿಸಿದ್ದಾರೆ.

ಭಾಗವಹಿಸುವ ಜನಪದ ಕಲಾವಿದರಿಗೆ ಪ್ರಯಾಣ ವೆಚ್ಚ, ವಸತಿ ಮತ್ತು ಊಟವನ್ನು ಒದಗಿಸುವುದರ ಜೊತೆಗೆ 300 ರೂ. ಗಳ ಸಂಭಾವನೆಯನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಜನಪದ ಕಲಾವಿದರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತಿದೆ ಎಂದು ಕೇಳಿ ಬಂದ ದೂರುಗಳಿಗೆ ಸ್ಪಂದಿಸಿರುವ ಕಾರ್ಯದರ್ಶಿ ಅವರು ಸಂಭಾವನೆ ಹೆಚ್ಚಳಕ್ಕೆ ಆದೇಶಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X