'ಕಸ್ತೂರಿ' ಪರಿಮಳ ಹರಡದಂತೆ ಬಳ್ಳಾರಿ ರಾಜಕೀಯ ಅಡ್ಡಿ?
ಬಳ್ಳಾರಿ, ಸೆ.28: ಗಣಿ ರಾಜಕೀಯದ ಹಿನ್ನೆಲೆಯಿಂದ ಕಸ್ತೂರಿ ಚಾನೆಲ್ ವೀಕ್ಷಣೆ ಬಳ್ಳಾರಿ , ಕೊಪ್ಪಳ ಹಾಗೂ ಗದಗ ಜಿಲ್ಲೆಯ ಜನತೆಗೆ ಲಭಿಸುವುದು ಕಷ್ಟವಾಗಲಿದೆ.
ರಾಜ್ಯದಿಂದಲೇ ಆಪ್ ಲಿಂಕ್ ಆಗುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಒಡೆತನದ ಕಸ್ತೂರಿ ಚಾನೆಲ್, ತನ್ನ ಪರಿಮಳವನ್ನು ಬಳ್ಳಾರಿಯಲ್ಲಿ ಬೀರಲು ಸಾಧ್ಯವಾಗುತ್ತಿಲ್ಲ.
ಬಳ್ಳಾರಿ ಜಿಲ್ಲೆಯ ಕೇಬಲ್ ಪ್ರಸರಣದ ಮೇಲೆ ಹತೋಟಿ ಹೊಂದಿರುವ ಎಂ ಎಲ್ ಸಿ ಜನಾರ್ದನ ರೆಡ್ಡಿ ಹೊಸ ಚಾನೆಲ್ ಗೆ ಕಡಿವಾಣ ಹಾಕಿದ್ದಾರೆ.
ಕಸ್ತೂರಿ ಚಾನೆಲ್ ಪ್ರಸಾರದ ಬಗ್ಗೆ ಸ್ಥಳೀಯ ಕೇಬಲ್ ಆಪರೇಟರ್ ಗಳನ್ನು ಕೇಳಿದರೆ, ಇನ್ನೂ ನಾಲ್ಕೈದು ದಿನಗಳಲ್ಲಿ ಪ್ರಸಾರವಾಗುತ್ತದೆ ಎಂದು ಸಬೂಬು ನೀಡುತ್ತಾರೆ ಎಂದು ವೀಕ್ಷಕರು ದೂರಿದ್ದಾರೆ.
ಆದರೆ ನಿಜ ಸಂಗತಿಯೆಂದರೆ, ಗಣಿ ಉದ್ಯಮಿ ಜನಾರ್ಧನ ರೆಡ್ಡಿ ಒಡೆತನದ ಸಿಟಿ ಕೇಬಲ್ ಮೂಲಕ 'ಕಸ್ತೂರಿ' ಚಾನೆಲ್ ಪ್ರಸಾರವಾಗುವ ಸಾಧ್ಯತೆ ಬಹುತೇಕ ಕಡಿಮೆ ಎಂದು ತಿಳಿದುಬಂದಿದೆ.
(ಏಜನ್ಸೀಸ್ )












Click it and Unblock the Notifications