ಸನ್ಮಾನಿಸಿ ಎಂದು ಪ್ರತಿ ಆಟಗಾರರು ಇವರಿಗೆ ಭಿಕ್ಷೆ ಬೇಡಬೇಕೆ

ಸನ್ಮಾನಿಸಿ ಎಂದು ಆಟಗಾರರು ಇವರಿಗೆ ಭಿಕ್ಷೆ ಬೇಡಬೇಕೆಬೆಂಗಳೂರು, ಸೆ.28 : ನಮ್ಮ ಸಾಧನೆಯನ್ನು ಗುರುತಿಸಿ ಸತ್ಕರಿಸಬೇಕೆಂದು ಸರ್ಕಾರಕ್ಕೆ ಪ್ರತಿ ಆಟಗಾರರು ಭಿಕ್ಷೆ ಬೇಡಬೇಕೆ ಎಂದು ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಸರ್ಕಾರದ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದಾರೆ.

ಹಾಕಿ ಆಟಗಾರರು ತಮ್ಮ ವಿರುದ್ಧ ಮಲತಾಯಿ ಧೋರಣೆ ತೋರಿದ್ದಕ್ಕೆ ಸತ್ಯಾಗ್ರಹದ ಬೆದರಿಕೆಯೊಡ್ಡಿದ್ದಕ್ಕೆ ಅವರಿಗೆ ಬಹುಮಾನ ದಕ್ಕಿತು. ಹೀಗೆ ಪ್ರತಿ ಆಟಗಾರರು ಮಾಡಬೇಕೆ ಎಂದು ಬಿಲಿಯರ್ಡ್ಸ್‌ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನೇ ಆಗಲಿ ಎಲ್ಲ ಆಟಗಳನ್ನು ಮತ್ತು ಆಟಗಾರರನ್ನು ಸಮಾನವಾಗಿ ಕಾಣಬೇಕು ಮತ್ತು ತಕ್ಕ ಪುರಸ್ಕಾರ ಸಿಗಬೇಕು. ಕರ್ನಾಟಕದಲ್ಲಿ ಪ್ರತಿಭೆಗೆ, ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ ಎಂದು ಪಂಕಜ್ ಅಡ್ವಾಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ಟ್ವೆಂಟಿ 20 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ರಾಬಿನ್ ಉತ್ತಪ್ಪ ಮತ್ತು ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಅವರಿಗೆ ಐದು ಲಕ್ಷ ಬಹುಮಾನ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಕ್ಕೆ ಹಾಕಿ ಆಟಗಾರರು ಮುಖ್ಯಮಂತ್ರಿ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ಹೂಡುವುಗಾಗಿ ಬೆದರಿಕೆ ಒಡ್ಡಿದ್ದರು.

(ಏಜೆನ್ಸಿ)

ಪೂರಕ ಓದಿಗೆ:
ಪಂಕಜ್ ಅಡ್ವಾಣಿಗೆ ಮತ್ತೆ ಒಲಿದ ವಿಶ್ವ ಬಿಲಿಯರ್ಡ್ಸ್ ಪಟ್ಟ
ಚಕ್‌ದೆ ಇಂಡಿಯಾ ಪರಿಣಾಮ : ಹಾಕಿ ತಂಡಕ್ಕೆ ಬಹುಮಾನ
ಕ್ರಿಕೆಟ್ ವೀರರಿಗೆ ಬಹುಮಾನ : ಹಾಕಿ ಆಟಗಾರರ ದಂಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+