ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಹಸ್ತಾಂತರ; ಸೆ.30ರ ನಂತರ ನಿರ್ಧಾರ

By Staff
|
Google Oneindia Kannada News

ಬೆಂಗಳೂರು, ಸೆ.28 : ಮುಖ್ಯಮಂತ್ರಿ ಸ್ಥಾನಕ್ಕೆ ಅಕ್ಟೋಬರ್ 3ರಂದು ರಾಜೀನಾಮೆ ಮಾಡುತ್ತೇನೆಂದು ನಾನು ಎಲ್ಲೂ ಹೇಳಿಲ್ಲ. ಇದು ಮಾಧ್ಯಮಗಳ ಪ್ರಕಟವಾಗಿರುವ ತಪ್ಪು ವರದಿ. ನಾನು ಆ ರೀತಿಯ ಹೇಳಿಕೆ ಕೊಟ್ಟಿಲ್ಲ. ಏನಿದ್ದರೂ ಸೆಪ್ಟೆಂಬರ್ 30ರ ನಂತರ ಅಧಿಕಾರ ಹಸ್ತಾಂತರ ಬಗ್ಗೆ ನಿರ್ಧರಿಸಲಾಗುವುದು ಎಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ (ಸೆ.28) ಸುದ್ದಿಗಾರರಿಗೆ ತಿಳಿಸಿದರು.

***
ಕೇಸ್ ವಾಪಸ್ ಪಡೆದ ಶ್ರೀರಾಮುಲು

ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧ ತಾನೂ ಯಾವುದೇ ದೂರು ನೀಡಿಲ್ಲ ಎಂದು ಸಚಿವ ಬಿ.ಶ್ರೀರಾಮುಲು ಸೆ.28ರಂದು ತಿಳಿಸಿದ್ದಾರೆ. ಆದರೆ ಪೋಲೀಸರು ದೂರು ಸ್ವೀಕರಿಸದ ಕಾರಣ ಶ್ರೀರಾಮುಲು ಈ ರೀತಿ ಹೇಳಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿವೆ.

***
ವೃತ್ತಿಶಿಕ್ಷಣ ಪ್ರವೇಶವನ್ನು ತಡೆದ ಸುಪ್ರೀಂಕೋರ್ಟ್

ವೃತ್ತಿಶಿಕ್ಷಣದಲ್ಲಿ ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಆಂಧ್ರಪ್ರದೇಶ ಸರಕಾರದ ಪ್ರತಿಪಾದನೆಗೆ ಸುಪ್ರೀಂಕೋರ್ಟ್ ಶುಕ್ರವಾರ (ಸೆ.28) ತಡೆಯಾಜ್ಞೆ ನೀಡಿದೆ.

***
ಚುನಾವಣೆ: ಬಳ್ಳಾರಿಯ 8 ಮತಗಟ್ಟೆಗಳಲ್ಲಿ ಮತದಾನ ಸ್ಥಗಿತ

ಬೆಂಗಳೂರು, ಸೆ.28 : ರಾಜ್ಯದ 209 ಪೌರ ಸಂಸ್ಥೆಗಳ 4920 ವಾರ್ಡ್‌ಗಳಿಗೆ ಶುಕ್ರವಾರ (ಸೆ.28) ಬೆಳಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ಮತದಾನ ಸಾಗಿದೆ.

ಮೈಸೂರು, ಮಂಗಳೂರು, ಬಳ್ಳಾರಿ, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ ಹಾಗೂ ದಾವಣಗೆರೆ ಸೇರಿ ಏಳು ಮಹಾನಗರ ಪಾಲಿಕೆ, 44 ನಗರಸಭೆ, 93 ಪುರಸಭೆ ಹಾಗೂ 65 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ. ಚುನಾವಣಾ ಕಣದಲ್ಲಿ ಒಟ್ಟು ಹದಿನೆಂಟು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿದ್ದಾರೆ. 10,163 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 3670 ಸೂಕ್ಷ್ಮ 3979 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.

  • ಬಳ್ಳಾರಿಯ 29ನೇ ವಾರ್ಡ್‌ನ ಎಂಟು ಮತಗಟ್ಟೆಗಳಲ್ಲಿ ಮತದಾನ ಸ್ಥಗಿತ.
  • ಉತ್ತರ ಕನ್ನಡದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅಡ್ಡಿ.
  • ರಾಜ್ಯದ ಬಹುತೇಕ ಕಡೆ ಮತದಾನ ಶಾಂತಿಯುತ.

(ದಟ್ಸ್‌ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X