ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ವಾರ್ತೆಯ ಮುಖ್ಯಾಂಶಗಳು :ಮುನಿಸಿಪಾಲಿಟಿಗೆ ಇಂದು ನಡೆದ..

By Staff
|
Google Oneindia Kannada News

ಬೆಂಗಳೂರು, ಸೆ.28 : ಮತದಾರರ ಪಟ್ಟಿಯಲ್ಲಿ ಕಾಣೆಯಾಗಿರುವ ಹೆಸರುಗಳು, ನಕಲಿ ಮತದಾನ, ಘರ್ಷಣೆ, ಲಾಠಿ ಪ್ರಹಾರ, ಮಳೆಯ ಕಾರಣ ಕೆಲವು ಕಡೆ ಮತದಾನ ವಿಳಂಬ, ನೀತಿ ಸಂಹಿತೆ ಉಲ್ಲಂಘನೆ. ಒಟ್ಟಾರೆಯಾಗಿ ಮತದಾನದ ದಿವಸ ಏನೇನು ನಡೆಯಬೇಕೋ ಅದೆಲ್ಲ ನಡೆದಿದೆ. ಎಷ್ಟೇ ಅಂದರೂ ಇದು ನಮ್ಮ ರಾಜ್ಯದ ಮುನಿಸಿಪಾಲಿಟಿ ಚುನಾವಣೆಯ ವರ್ತಮಾನವಲ್ಲವೆ.

ಗೊಂದಲಗಳ ಗೂಡುಗಳ ನಡುವೆಯೇ ಸ್ಥಳೀಯ ಸಂಸ್ಥೆ ಚುನಾವಣೆಗಳು ಬಹುತೇಕ ಶಾಂತಯುತವಾಗಿ ನಡೆಯಿತು ಅಂತಲೇ ಬರೆಯಬೇಕು.. ಒಟ್ಟಾರೆಯಾಗಿ ಮಧ್ಯಾಹ್ನದ ಹೊತ್ತಿಗೆ ಶೇ.35ರಷ್ಟು ಮತದಾನ ದಾಖಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಕ್ಷೇತ್ರ ಗುರುಮಿಟ್ಕಲ್‌ನಲ್ಲಿ, ಶಾಸಕ ಯೋಗೇಶ್ವರ್ ಭಟ್ ಸೂರತ್ಕಲ್‌ನಲ್ಲಿ, ಮುಜರಾಯಿ ಸಚಿವ ಬಿ.ನಾಗರಾಜ ಶೆಟ್ಟಿ ಮಂಗಳೂರಿನ ಬಜ್ಪೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಪುತ್ತೂರು ಪುರಸಭೆ ಹಾರಾಡಿ, ರಾಜ್ಯಸಭಾ ಸದಸ್ಯ ಜಾನಾರ್ಧನ ಪೂಜಾರಿ ಭಂಟ್ವಾಳದಲ್ಲಿ ತಮ್ಮ ಮತ ಚಲಾಯಿಸಿದರು.

ಚುನಾವಣಾ ವಿಶೇಷಗಳು:

  • ಕೋಲಾರ, ಚಿಕ್ಕಮಗಳೂರು, ದಾವಣಗೆರೆ, ಹೊನ್ನಾಳಿ, ಮಂಡ್ಯ, ಗದಗ, ಬಾಗಲಕೋಟೆ, ಧಾರವಾಡ ಕುಣಿಗಲ್‌ನಲ್ಲಿ ಲಾಠಿ ಪ್ರಹಾರ.
  • ಬೆಳಗಾವಿ, ಧಾರವಾಡ, ಮಡಿಕೇರಿ, ಕಾರವಾರಗಳಲ್ಲಿ ಮತದಾನಕ್ಕೆ ಮಳೆಯ ಅಡ್ಡಿ.
  • ಧಾರವಾಡ 9ನೇ ವಾರ್ಡ್ ಬ್ಯಾಲೆಟ್ ತೆಗೆದುಕೊಂಡು ಹೋದ ಬಾಲಕ.
  • ಗಿರೀಶ್ ಮಟ್ಟನ್ನನವರ್, ತನ್ವೀರ್ ಸೇಠ್ ಹಾಗೂ ಕೆಲವು ಸಚಿವರುಗಳ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ.
  • ಚಾಮರಾಜನಗರ ಶೇ. 42,ಹಾಸನ ಶೇ. 35 ಹಾಗೂ ಬಿಜಾಪುರದಲ್ಲಿ ಶೇ.40ರಷ್ಟು ಮತದಾನ ನಡೆದಿದೆ.
  • ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿರುವ ವಾರ್ಡ್‌ಗಳಲ್ಲಿ ನಾಳೆ ಮರು ಮತದಾನ.
  • ಮುಧೋಳ: ನಕಲಿ ಮತದಾನ ಮಾಜಿ ಸಚಿವ ಆರ್.ಬಿ ತಿಮ್ಮಾಪುರ ಪ್ರತಿಭಟನೆ.
  • ಮೈಸೂರು: ನೀತಿ ಸಂಹಿತೆ.ಉಲ್ಲಂಘನೆ 10 ಮಂದಿ ಬಂಧನ ಎರಡು ವಾರ ನ್ಯಾಯಾಂಗ ಬಂಧನಕ್ಕೆ ಆದೇಶ.
  • ಹಿರೇಕೆರೂರು: ಬಿ.ಸಿ ಪಾಟೀಲ್‌ರಿಂದ ನಕಲಿ ಮತದಾನಕ್ಕೆ ಯತ್ನ ಬಿಜೆಪಿ ಆರೋಪ.

(ದಟ್ಸ್‌ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X