ಹಳಿಗಳ ಮೂಲಕ ಗ್ರಾಮಗಳಿಗೆ ನೀರು; ಲಾಲೂ ಹೊಸ ರೈಲು!
ಮುಂಬಯಿ, ಸೆ.28 : ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ನೀರಿನ ಸಮಸ್ಯೆಗೆ ಹೊಸ ಪರಿಹಾರ ಸೂಚಿಸಿದ್ದಾರೆ. ಅವರ ಈ ಯೋಜನೆ ಕಾರ್ಯಗತವಾದರೆ ಭಾರತದ ಸಾಕಷ್ಟು ಗ್ರಾಮಗಳಿಗೆ ನೀರು ಸಿಗುವುದರಲ್ಲಿ ಅನುಮಾನವಿಲ್ಲ.
ರೈಲ್ವೆ ಹಳಿಗಳ ಅಕ್ಕಪಕ್ಕ ಪೈಪ್ ಹಾಕಿ ಅಗತ್ಯವಿರುವ ಕಡೆಗೆ ಕುಡಿಯುವುದಕ್ಕೆ ಮತ್ತು ಕೃಷಿಗೆ ಈ ನೀರನ್ನು ಒದಗಿಸುವುದು ಲಾಲೂರವರ ಹೊಸ ಯೋಜನೆ.
ಲಾತೂರ್‌ನಲ್ಲಿ ಲಾತೂರು-ಉಸ್ಮಾನಾಬಾದ್ ಹಾಗೂ ಲಾತೂರ್-ಮುಂಬೈ ರೈಲು ಸೇವೆಯನ್ನು ಪ್ರಾರಂಭಿಸಿದ ಬಳಿಕ ಮಾತನಾಡಿದ ಲಾಲೂ , ರೈಲ್ವೆ ಭೂಮಿ ಮತ್ತು ಹಳಿಗಳು ಸಾಗಿರುವ ಕಡೆ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಹಾಕಿ ದೇಶದಲ್ಲಿ ಹೊಸ ಸಂಪರ್ಕ ಕ್ರಾಂತಿಯನ್ನು ತರಬಹುದು. ಹೀಗೆ ಮಾಡಿ ಒಬ್ಬ ಖ್ಯಾತ ಉದ್ಯಮಿಗಿಂತಲೂ ಅಧಿಕ ಹಣವನ್ನು ರೈಲ್ವೆ ಇಲಾಖೆಗೆ ತರಬಹುದು ಎಂದು ಹೇಳಿದರು.
(ಏಜನ್ಸೀಸ್)












Click it and Unblock the Notifications