ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಧಾನಿ ನವದೆಹಲಿಗೆ ಒಲಿದ 'ಉತ್ತಮ ನಗರಿ' ಪಟ್ಟ

By Staff
|
Google Oneindia Kannada News

ಮುಂಬಯಿ, ಸೆ.28 : ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಸೇರಿದಂತೆ 48 ಭಾರತೀಯ ನಗರಗಳ ಪೈಕಿ ಬಾಳ್ವೆ ನಡೆಸಲು ಉತ್ತಮ ಸ್ಥಳವಾಗಿ ದಿಲ್ಲಿ ಆಯ್ಕೆಯಾಗಿದೆ.

ಉತ್ತಮ ಜೀವನ ಮಟ್ಟ, ಸಾರಿಗೆ ಮತ್ತು ಮೂಲಭೂತ ಸೌಲಭ್ಯಗಳು, ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಕಾರ್ಮಿಕ ಬಲ, ಉತ್ತಮ ತಲಾದಾಯ, ಬೃಹನ್ಮುಂಬಯಿಗೆ ಹೋಲಿಸಿದರೆ ಕಡಿಮೆ ಜನಸಂಖ್ಯೆ. ಹೀಗೆ 57 ಮಾನದಂಡಗಳೊಂದಿಗೆ ಅರ್ನೆಸ್ಟ್ ಅಂಡ್ ಯಂಗ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ದಿಲ್ಲಿ ಮುಂಚೂಣಿಯಲ್ಲಿದೆ.

ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ನಗರಾಡಳಿತಕ್ಕೆ ಸಂಬಂಧಿಸಿದಂತೆ ಬೃಹನ್ಮುಂಬಯಿ ಪ್ರಥಮ ಹಾಗೂ ದಿಲ್ಲಿ ದ್ವಿತೀಯ ಸ್ಥಾನಗಳಲ್ಲಿವೆ. ಶಿಕ್ಷಣ, ಆಸ್ಪತ್ರೆಯಂತಹ ಸಾಮಾಜಿಕ ಸೌಲಭ್ಯಗಳಲ್ಲೂ ದಿಲ್ಲಿ ಮುಂದಿದೆ ಎಂದು ಸಮೀಕ್ಷೆ ತಿಳಿಸಿದೆ. ಗುರುವಾರ (ಸೆ.27) ಆಯೋಜಿಸಿದ್ದ ಅಂತರಾಷ್ಟ್ರೀಯ ರಿಯಲ್ ಎಸ್ಟೇಟ್ ಸಮಾವೇಶದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಎಸ್.ಜೈಪಾಲ್ ರೆಡ್ಡಿ ಈ ಅಂಶಗಳನ್ನು ಪ್ರಸ್ತಾಪಿಸಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X