ಹಚ್ ಇನ್ಮುಂದೆ ವೊಡಾಫೋನ್!666ರೂ.ಗೆ ಮೊಬೈಲ್!
ನವದೆಹಲಿ, ಸೆಪ್ಟೆಂಬರ್ 21 : ಹಚ್ ಮೊಬೈಲ್ ಕಂಪನಿಯ ಹೆಸರು ಇಂದಿನಿಂದ(ಸೆ.21) ಬದಲಾಗಿದೆ. ಇನ್ನು ಮುಂದೆ ಹಚ್ ಬ್ರಾಂಡನ್ನು ವೊಡಾಫೋನ್ ಎಂದು ಗುರ್ತಿಸಲಾಗುತ್ತದೆ.
ನೋಕಿಯಾ, ಸ್ಯಾಮ್ಸಂಗ್, ಮೋಟೊರೋಲಾ ಮತ್ತು ಸೋನಿ ಎರಿಕ್ಸನ್ ಮತ್ತಿತರ ಮೊಬೈಲ್ ಕಂಪನಿಗಳಿಗೆ ಸ್ಪರ್ಧೆ ನೀಡಲು ವೊಡಾಫೋನ್ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಕಡಿಮೆ ಬೆಲೆಗೆ ಅಂದರೆ 666 ರೂ.ಗೆ ಹ್ಯಾಂಡ್ ಸೆಟ್ ನೀಡಲು ಸಂಸ್ಥೆ ಸಿದ್ಧತೆ ನಡೆಸಿದೆ.
ಪ್ರಪಂಚ ಪ್ರಸಿದ್ಧ ಟೆಲಿ ಸಂಪರ್ಕ ಕಂಪನಿ ವೊಡಾಫೋನ್ ಭಾರತಕ್ಕೆ ಬಂದಿದ್ದು, ಮೇ ತಿಂಗಳ ಕೊನೆಯಲ್ಲಿ ಹಚೀಸನ್ ಕಂಪನಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಇದು ದೇಶದಲ್ಲೆ ಅತ್ಯಂತ ದೊಡ್ಡ ಬ್ರಾಂಡ್ ಪರಿವರ್ತನೆ ಎಂದು ವೊಡಾಫೋನ್ ಹೇಳಿದೆ. ಈ ಪರಿವರ್ತನೆ ಟೆಲಿ ಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಬೆಲೆ ಸಮರಕ್ಕೆ ನಾಂದಿ ಹಾಡಲಿದೆಯೆ?
(ಏಜನ್ಸೀಸ್)












Click it and Unblock the Notifications