ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡಿಗೆ ಗಟ್ಟಿ ಇದ್ದರೆ ಸಿಯಾಚಿನ್‌ ಚಾರಣಕ್ಕೆ ಬನ್ನಿ

By Staff
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20 : ಅಲ್ಲಿ ಮೈ ಮೂಳೆಗಳನ್ನು ಕೊರೆಯುವ ಮೈನಸ್ 50ಡಿಗ್ರಿ ಸೆಲ್ಸಿಯಸ್ ತಾಪಮಾನ. ಅದು ಸಮುದ್ರ ಮಟ್ಟದಿಂದ 18,875ಅಡಿ ಎತ್ತರದ ಪ್ರದೇಶ. ಕೊಂಚ ಅತ್ತ ಇತ್ತ ಸುಳಿದರೆ ಪಾಕಿಸ್ಥಾನ, ಚೀನಾದ ಸರಹದ್ದುಗಳು. ಅದೇ ರುದ್ರ ಸೌಂದರ್ಯದ ಸಿಯಾಚಿನ್ ಹಿಮನದಿ!

ಹಿಮಾಲಯದ ಕಾರಕೋರಂ ಪರ್ವತ ಶ್ರೇಣಿಗಳಲ್ಲಿ ಇರುವ ಸಿಯಾಚಿನ್ ಹಿಮನದಿಗೆ ಇಂದಿನಿಂದ (ಸೆ.20) ನಾಗರೀಕರು ಪರ್ವತಾರೋಹಣಕ್ಕೆ ಹೊರಡಬಹುದು. ಆದರೆ ಗುಂಡಿಗೆ ಗಟ್ಟಿ ಇರಬೇಕಷ್ಟೆ. ಈ ಹಿಂದೆ ಕಾರಕೋರಂ ಪರ್ವತಗಳಿಗೆ ನಾಗರೀಕರು ಭೇಟಿ ನೀಡಬೇಕಾದರೆ ಪಾಕಿಸ್ಥಾನದ ಆಕ್ಷೇಪವಿತ್ತು.

ಸಿಯಾಚಿನ್‌ನಲ್ಲಿ ನಮ್ಮ ದೇಶಕ್ಕೆ ಸೇರಿದ ಪ್ರದೇಶದಲ್ಲಿ ಚಾರಣವನ್ನು ಕೈಗೊಳ್ಳಲಾಗುವುದೆಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಇದೊಂದು ಸಂಪೂರ್ಣ ಸಾಹಸಭರಿತ ಪರ್ವತಾರೋಹಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಯಾಚಿನ್ ಚಾರಣವು ಸೆ.20ರಿಂದ ಅ.11ರ ವರೆಗೂ ಮುಂದುವರಿಯಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X