ಸಪ್ಪರ್ ಥಿಯೇಟರ್ :'ನೀ ನಾನಾದ್ರೆ ನಾ ನೀನೇನಾ'

ಬೆಂಗಳೂರು, ಸೆಪ್ಟೆಂಬರ್ 20 : ಇದು ಬ್ರಿಗೇಡ್ ಹಾಸ್ಪಿಟ್ಯಾಲಿಟಿಯವರು ನಿಮಗಾಗಿ ತಂದಿರುವ ಈ ವಾರಾಂತ್ಯದ ಪ್ರಫುಲ್ಲ ಮನರಂಜನೆ.

ಬೆಂಗಳೂರಿಗರಿಗೆ 'ಸಪ್ಪರ್ ಥಿಯೇಟರ್' ಎನ್ನುವ ಕಾನ್ಸೆಪ್ಟ್ ಇನ್ನೂ ಅಷ್ಟು ಪರಿಚಿತವಾದ್ದುದಲ್ಲ. ಅದರಲ್ಲೂ ಕನ್ನಡ ನಾಟಕ 'ಸಪ್ಪರ್ ಥಿಯೇಟರ್' ಅಡಿಯಲ್ಲಿ ಕರ್ನಾಟಕದಲ್ಲಿ ನಡೆದ ಉದಾಹರಣೆ ಎಲ್ಲೂ ಇಲ್ಲ.

ಈ ದಿಕ್ಕಿನಲ್ಲಿ ಬ್ರಿಗೇಡ್ ಹಾಸ್ಪಿಟ್ಯಾಲಿಟಿವರು ಜೆ.ಪಿ.ನಗರ 7ನೇ ಹಂತದಲ್ಲಿರುವ ಬ್ರಿಗೇಡ್ ಮಿಲ್ಲೆನ್ನಿಯಮ್ ಕಾಂಪ್ಲೆಕ್ಸ್ ನಲ್ಲಿರುವ ಎಂಎಲ್ಆರ್ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ವರ್ಷವಿಡೀ ನಡೆಸಬೇಕೆನ್ನುವ ಆಶಯದಿಂದ 'ಸಪ್ಪರ್ ಥಿಯೇಟರ್' ಯೋಜನೆ ಹಾಕಿಕೊಂಡಿದ್ದಾರೆ.

ಸೆಪ್ಟೆಂಬರ್ 22 ಶನಿವಾರ ಸಂಜೆ 7.30ಕ್ಕೆ ಸಂಕೇತ್ ನಾಟಕ ತಂಡದವರಿಂದ ಪ್ರಸ್ತುತವಾಗಲಿರುವ ನಾಟಕ'ನೀ ನಾನಾದ್ರೆ ನಾ ನೀನೇನಾ'.

ನಿರ್ದೇಶನ : ಸುರೇಂದ್ರನಾಥ್, ನಟನೆ : ಶ್ರೀನಿವಾಸ ಪ್ರಭು ಮತ್ತು ಸಿಹಿಕಹಿ ಚಂದ್ರು.ಈ ನಾಟಕವನ್ನು ಕಾಮಿಡಿ ಆಫ್ ಎರರ್ಸ್ ನ ಕನ್ನಡ ವೇಷ ಎನ್ನಲಡ್ಡಿಯಿಲ್ಲ. ಇಬ್ಬರು ನಟರು ದ್ವಿಪಾತ್ರಾಭಿನಯದಲ್ಲಿ ಏಕಪ್ರಕಾರವಾಗಿ ಅಭಿನಯಿಸುತ್ತಾ ಸಾಗುವುದೇ ನಾಟಕದ ವೈಶಿಷ್ಟ್ಯ. ರಂಗಸ್ಥಳದಲ್ಲಿ ಬಿಡುವಿಗೆ ಅವಕಾಶವೆನ್ನುವುದೇ ಇರುವುದಿಲ್ಲ.

ಸಿಹಿಕಹಿ ಚಂದ್ರು ಅವರನ್ನು ಕನ್ನಡ ನಾಟಕ ಪ್ರಿಯರಿಗೆ ಪರಿಚಯಿಸುವ ಅಗತ್ಯವಿಲ್ಲ. ಅವರ ಟಿಪಿಕಲ್ ಹಾಸ್ಯಹೊನಲು ನಾಟಕದಲ್ಲಿ ವಿಜೃಂಭಿಸುವುದು ನಿಶ್ಚಯ. ಇನ್ನು ಶ್ರೀನಿವಾಸಪ್ರಭುನೂ ಹಾಗೇನೇ. ಇವರಿಬ್ಬರ ತಾಳಮೇಳದಲ್ಲಿ ಶನಿವಾರ ಸಂಜೆ 'ನೀ ನಾನಾದ್ರೆ ನಾ ನೀನೇನಾ ನೋಡುವುದೊಂದು ಅನುಭವ.

ಭರ್ಜರಿ ಊಟ ಮತ್ತು ಟಿಕೆಟಿನ ಬೆಲೆ ಎರಡೂ ಸೇರಿ 150 ರೂಪಾಯಿ. ಮಕ್ಕಳಿಗೆ 100 ರೂಪಾಯಿ. ಟಿಕೆಟುಗಳಿಗೆ ಮಾತಾಡಿ : ಕರ್ನಲ್ ಮಲ್ಹೋತ್ರ[98804 05400], ಶೀಮತಿ ವೀಣಾ ಭಟ್ [98456 95015], ವುಡ್ರೋಸ್ ಕ್ಲಬ್ [ 080-4199 5999]

ವಿಶೇಷ ಸೂಚನೆ : (ಅ) ಈ ನಾಟಕ ರಂಗಶಂಕರದಲ್ಲಿ ಬಿಟ್ಟು ಬೇರೆ ಎಲ್ಲೂ ಪ್ರದರ್ಶನಗೊಂಡಿಲ್ಲ (ಆ) ಕನ್ನಡ ಭಾಷೆ ಗೊತ್ತಿಲ್ಲದವರೂ ಕೂಡ ನಾಟಕವನ್ನು ನೋಡಿ ನಲಿಯಬಹುದು.(ಇ) ಶನಿವಾರ ಸಾಯಂಕಾಲ ತಾನೆ, ಪರವಾಗಿಲ್ಲ. (ಈ) ಕಾರಿನಲ್ಲಿ ಬಂದಿದ್ದರೂ ಕೈಯಲ್ಲಿ ಕೊಡೆಯಿದ್ದರೆ ಲೇಸು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+