ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕಾಟ್ಲೆಂಡ್ ಹುಡುಗಿಯರಿಂದ ಕಿನ್ನಾಳ ಬೊಂಬೆಗಳಿಗೆ ಜೀವ

By Staff
|
Google Oneindia Kannada News

Global recognisation for Kinnal craftಕೊಪ್ಪಳ, ಸೆಪ್ಟೆಂಬರ್ 07 : ಉತ್ತರ ಕನ್ನಡದ ಕಿನ್ನಾಳ ಬೊಂಬೆಗಳಿಗೆ ಮನಸೋತ ಸ್ಕಾಟ್ಲೆಂಡಿನ ಗ್ಲಾಸ್ಗೊ ವಿವಿಯ ವಿದ್ಯಾರ್ಥಿನಿಯರು, ಅದಕ್ಕೆ ಜಾಗತಿಕ ಮನ್ನಣೆಗೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮವರು ಕಿನ್ನಾಳ ಗೊಂಬೆಗಳನ್ನು ಕಡೆಗಣಿಸಿದ್ದರೂ, ಸ್ಕಾಟ್ಲೆಂಡಿನ ವಿದ್ಯಾರ್ಥಿನಿಯರು ಅವುಗಳನ್ನು ಅಪ್ಪಿಕೊಂಡಿದ್ದಾರೆ.

ಕಿನ್ನಾಳ ಎಂಬ ಗ್ರಾಮದ ಹೆಸರೆ ಈ ಕಲೆಗೆ ಅಂಟಿಕೊಂಡಿದೆ. ವಿಜಯನಗರ ರಾಜರ ಕಾಲದಿಂದಲೂ ತನ್ನ ಅಸ್ತಿತ್ವವನ್ನು ಈ ಕಲೆ ಉಳಿಸಿಕೊಂಡಿದೆ. ಜಾಗತೀಕರಣದ ಹೊಡೆತಕ್ಕೆ ಸಿಕ್ಕಿ ಎಷ್ಟೋ ಕಲೆಗಳು ನಿರ್ನಾಮವಾಗುತ್ತಿದ್ದರೆ ಕಿನ್ನಾಳ ಕಲೆ ಅದೇ ಜಾಗತೀಕರಣಕ್ಕೆ ಸಿಕ್ಕಿ ಫೀನಿಕ್ಸ್‌ನಂತೆ ಜೀವಪಡೆದಿದೆ.

ಇದೆಲ್ಲ ಹೇಗಾಯಿತು? :

ಸ್ಕಾಟ್‌ಲ್ಯಾಂಡ್ ನ ಆರು ವಿದ್ಯಾರ್ಥಿನಿಯರ ತಂಡ ಕಿನ್ನಾಳ ಗ್ರಾಮದಲ್ಲಿದ್ದು ಈ ಕಲೆಯನ್ನು ಕಲಿತರು. ಇದಕ್ಕೆ ಆಧುನಿಕ ತಂತ್ರಜ್ಞಾನದ ಲೇಪನವನ್ನೂ ನೀಡಿದರು (ಹಾಗಿದ್ದರೆ ಇದು 'ಕರ"ಕುಶಲ ಕಲೆ ಹೇಗಾಗುತ್ತದೆ ಎಂದು ಕೇಳಬೇಡಿ!). ಅವುಗಳಿಗೆ ಹೊಸದಾಗಿ ಕಂಪ್ಯೂಟರಿನ ತಂತ್ರಜ್ಞಾನ ಅಳವಡಿಸಿ ಹೊಸ ಹೊಸ ವಿನ್ಯಾಸ, ಕಲೆಗಳನ್ನು ಸೃಷ್ಟಿಸಿದರು. ಎರಡು ತಿಂಗಳಲ್ಲಿ ಜಾಗತಿಕ ಮಟ್ಟದ ಸ್ಥಾನವನ್ನೂ ದೊರಕಿಸಿಕೊಟ್ಟರು. ಈಗ ಅಮೆರಿಕ, ಲಂಡನ್, ಜಪಾನ್ ನ ಕರಕುಶಲ ಮಾರುಕಟ್ಟೆಗಳಲ್ಲಿ ಇವು ಎಲ್ಲರ ಕಣ್ಣು ಕುಕ್ಕುತ್ತಿವೆ

ತಮ್ಮ ಸ್ವಂತ ಖರ್ಚಿನಲ್ಲಿ ಕಿನ್ನಾಳ ಕಲಾ ಶಿಬಿರದಲ್ಲಿ ಭಾಗವಹಿಸಿ ಏಕಪ್ಪ ಚಿತ್ರಗಾರ ಬಳಿ ಕಲೆಯನ್ನು ಕಲಿತಿದ್ದಾರೆ. ಟೇಲಿ, ಅಲ್ಸಾ, ನಿಕ್, ಷಾಲಾ ರೋಬೋ ಮತ್ತು ಫೀಯೇ-ಇವರೇ ಆ ವಿದ್ಯಾರ್ಥಿನಿಯರು. ಇನ್ನೊಂದು ವಾರದಲ್ಲಿ ಇವರು ತಾಯ್ನಾಡಿಗೆ ತೆರಳಲಿದ್ದಾರೆ. ಅಲ್ಲಿ ಈ ಕುರಿತು ಚಿತ್ರಮಾಲಿಕೆ ತಯಾರಿಸಲಿದ್ದಾರೆ. ಈಗಾಗಲೇ ಇವರು www.glasgowkinnalcraft.org ಎಂಬ ವೆಬ್ ಸೈಟನ್ನೂ ಸಿದ್ಧಪಡಿಸಿದ್ದಾರೆ

ಬೀದರ್ ನ ಬಿದ್ರಿಕಲೆ, ಚನ್ನಪಟ್ಟಣದ ಗೊಂಬೆಗಳು, ಮೊಳಕಾಲ್ಮೂರಿನ ಸೀರೆಗಳು ಹೀಗೆ ಇನ್ನೂ ಹಲವಾರು ಕರಕುಶಲ ಕಲೆಗಳು ನೆಲೆಕಳೆದುಕೊಳ್ಳುತ್ತಿವೆ. ಕುಲಕಸುಬುಗಳನ್ನೆ ನೆಚ್ಚಿಕೊಂಡಿದ್ದ ಜನ ಅತಂತ್ರರಾಗುತ್ತಿದ್ದಾರೆ. ಸಾಲದಕ್ಕೆ ಚೀನಾದ, ಜಪಾನ್ ನ ಇಲೆಕ್ಟ್ರಾನಿಕ್ ಆಟಿಕೆಗಳು ಮಕ್ಕಳ ಕೈಸೇರುತ್ತಿವೆ. ಇಂತಹ ಸ್ಥಿತಿಯಲ್ಲಿ ಈ ವಿದ್ಯಾರ್ಥಿನಿಯರ ಸಾಧನೆ ನಿಜಕ್ಕೂ ಶ್ಲಾಘನೀಯ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X