ಖಾಸಗಿ ಬಸ್ಸು ಹೊಂಡಕ್ಕೆ ಬಿದ್ದು ಇಬ್ಬರ ಸಾವು
ಚಾಮರಾಜನಗರ ಜಿಲ್ಲೆಯ ಅರಕಲವಾಡಿಯಲ್ಲಿ ಖಾಸಗಿ ಬಸ್ಸೊಂದು ಭಾನುವಾರ ರಾತ್ರಿ ಹೊಂಡಕ್ಕೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ತಿರುವಿನಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಬಸ್ಸು ಹೊಂಡಕ್ಕೆ ಉರುಳಿತೆಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬಸ್ಸಿನ ಚಾಲಕ ಮತ್ತು ಆತನ ಸಹಾಯಕ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಾಮರಾಜನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
*
ಬೆಂಗಳೂರಿಗೆ ಹಾಲಿವುಡ್ ನಟ ಮ್ಯಾಚೋ ಮ್ಯಾನ್ ಅರ್ನಾಲ್ಡ್
ಹಾಲಿವುಡ್ ನ ಖ್ಯಾತ ನಟ ಹಾಗೂ ಕ್ಯಾಲಿಫೋರ್ನಿಯಾದ ರಾಜ್ಯಪಾಲ ಅರ್ನಾಲ್ಡ್ ಸ್ವರ್ಜೆನೆಗರ್ ಮುಂದಿನ ನವೆಂಬರ್ ನಲ್ಲಿ ಬೆಂಗಳೂರಿಗೆ ಭೇಟಿ ಕೊಡುವ ಸಾಧ್ಯತೆಯಿದೆ.
ಆದರೆ ಅರ್ನಾಲ್ಡ್ ಯಾವುದೇ ಸಿನೆಮಾ ಚಿತ್ರೀಕರಣಕ್ಕಾಗಿ ಇಲ್ಲಿಗೆ ಬರುತ್ತಿಲ್ಲ. ಬದಲಾಗಿ ಕ್ಯಾಲಿಫೊರ್ನಿಯಾದ ವಿಶ್ವವಿದ್ಯಾಲಯದ ಪ್ರ ಶೈಕ್ಷಣಿಕ ಪ್ರವಾಸಕ್ಕಾಗಿ ಬರುತ್ತಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ(ಐಐಎಸ್ ಸಿ) ಹಾಗು ಕ್ಯಾಲಿಫ್ ವಿಶ್ವವಿದ್ಯಾಲಯ ಪರಸ್ಪರ ಶೈಕ್ಷಣಿಕ ವಿನಿಯಮ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications