ವಿದ್ಯಾರ್ಥಿನಿಯರಿಬ್ಬರ ಪ್ರಾಣ ತಿಂದ ಶಾಲಾ ಕಾಂಪೌಂಡ್ !
ತುಮಕೂರು, ಆಗಸ್ಟ್ 03 : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಲ್ಲಿ ಶಾಲಾ ಕಾಂಪೌಂಡ್ ಕುಸಿದು, ಇಬ್ಬರು ಪುಟ್ಟ ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಘಟನೆ ಶುಕ್ರವಾರ ವರದಿಯಾಗಿದೆ.
ನತದೃಷ್ಟ ವಿದ್ಯಾರ್ಥಿನಿಯರನನ್ನು ಚೈತ್ರಾ(6) ಮತ್ತು ಯಶಸ್ವಿನಿ(6) ಎಂದು ಗುರ್ತಿಸಲಾಗಿದೆ. ಚಿಕ್ಕನಾಯಕನಹಳ್ಳಿಯ ಖಾಸಗಿ ಶಾಲೆಯಲ್ಲಿ ಈ ವಿದ್ಯಾರ್ಥಿನಿಯರು ಒಂದನೇ ತರಗತಿ ಓದುತ್ತಿದ್ದರು. ಇವರ ಮೇಲೆ ಶಾಲಾ ಆವರಣದ ಗೋಡೆ ಕುಸಿಯಲು, ಕಳಪೆ ಕಾಮಗಾರಿಯೇ ಕಾರಣ ಎಂದು ಪೋಷಕರು ದೂರಿದ್ದಾರೆ.
ಮಠವೊಂದು ಈ ಶಾಲೆಯನ್ನು ನಡೆಸುತ್ತಿದೆ ಎನ್ನಲಾಗಿದೆ. ಪುಟ್ಟು ಬಾಲೆಯರಿಬ್ಬರ ಶವಗಳನ್ನು ನೋಡಲು ನೂರಾರು ಜನರು ಆಸ್ಪತ್ರೆಗೆ ಬಂದಿದ್ದರು. ಶವಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದ ಸಾರ್ವಜನಿಕರು, ಘಟನೆಯನ್ನು ಖಂಡಿಸಿದರು.
(ಯುಎನ್ಐ)
ಇನ್ನೊಂದು ದುರಂತ :
ಶಾಲಾಮಹಡಿಯಿಂದ ಬಿದ್ದ ಸೋನಿ ಪುಟ್ಟಿ ಉಳಿಯಲಿಲ್ಲ!












Click it and Unblock the Notifications