ಅತ್ಯಾಚಾರಕ್ಕೆ ಶಿಕ್ಷೆ : ಸುಪ್ರೀಂ ಕೋರ್ಟ್ ಹೊಸ ವ್ಯಾಖ್ಯಾನ
ನವದೆಹಲಿ, ಜುಲೈ 27 : ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮೌಖಿಕ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡೇ, ಆರೋಪಿಗೆ ಶಿಕ್ಷೆ ವಿಧಿಸಬಹುದು. ಇಂತಹ ಮಹತ್ವದ ತೀರ್ಪನ್ನ್ನು ಸುಪ್ರೀಂ ಕೋರ್ಟ್ ನೀಡಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅತ್ಯಾಚಾರ ನಡೆದ ಬಗ್ಗೆ ವೈದ್ಯಕೀಯ ಪರೀಕ್ಷೆಗಳು ಖಚಿತಪಡಿಸಬೇಕು ಅನ್ನುವಂತಿಲ್ಲ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ನೀಡುವ ನಂಬಲರ್ಹ ಹೇಳಿಕೆಗಳಿಗೂ ಮಾನ್ಯತೆ ಇದೆ ಎಂಬುದು ಈಗ ಸ್ಪಷ್ಟವಾಗಿದೆ.
ಹಿನ್ನೆಲೆ : 1991ರಲ್ಲಿ ಕಾಫಿ ಎಸ್ಟೇಟ್ ವೊಂದರಲ್ಲಿ ಬಿ.ಸಿ.ದೇವಾ ಎಂಬ ವ್ಯಕ್ತಿ, ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಆತನಿಗೆ ಹೈಕೋರ್ಟ್ 7ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ತೀರ್ಪು ಪ್ರಶ್ನಿಸಿ, ಆರೋಪಿ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.
(ಏಜನ್ಸೀಸ್)












Click it and Unblock the Notifications