ಅಬ್ದುಲ್ ಕಲಾಂ ಜೊತೆ ಮಾತುಕತೆಗೆ ಹೊಸ ವೆಬ್ ಸೈಟ್

ಚೆನ್ನೈ, ಜುಲೈ 27 : ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹೊಸ ವೆಬ್ ಸೈಟ್ ಗುರುವಾರ ರಾತ್ರಿ ಆರಂಭಗೊಂಡಿದೆ.

ಹೊಸ ವೆಬ್ ಸೈಟ್ www.abdulkalam.comನಲ್ಲಿ ಕಲಾಂಗೆ ಸಂಬಂಧಿಸಿದ ಎಲ್ಲಾ ವಿವರಗಳು ಲಭ್ಯ. ಹಿಂದಿನ ರಾಷ್ಟ್ರಪತಿ ವೆಬ್ ಸೈಟ್ ನಲ್ಲಿದ್ದ ಕಲಾಂ ವಿಚಾರಗಳನ್ನು ಈ ವೆಬ್ ಸೈಟ್ ಗೆ ಸೇರಿಸಲಾಗಿದೆ. ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ವೆಬ್ ಸೈಟ್ ಗೆ ಕಲಾಂ ಚಾಲನೆ ನೀಡಿದರು.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ನನ್ನೊಂದಿಗೆ ಇ-ಮೇಲ್ ಮುಖಾಂತರ ಸಂವಹನ ನಡೆಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ಪ್ರಯತ್ನಿಸುತ್ತೇನೆ ಎಂದು ಕಲಾಂ ಹೇಳಿದರು.

ಮೊದಲ ದಿನವೇ ಈ ಅಂತರ್ಜಾಲ ತಾಣಕ್ಕೆ 13,828 ಮಂದಿ ಭೇಟಿ ನೀಡಿದ್ದಾರೆ.ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಕಲಾಂ ಅವರಿಗೆ, ಈ ವೆಬ್ ಸೈಟ್ ಸಹಾಯಕವಾಗಲಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+