ಡಾ.ಹನೀಫ್ ಈಗ ಕಳಂಕ ಮುಕ್ತ : ಆಸ್ಟ್ರೇಲಿಯಾ ಸ್ಪಷ್ಟನೆ
ಮೆಲ್ಬೋರ್ನ್,ಜುಲೈ 27 : ಕೊನೆಗೂ ಡಾ.ಹನೀಫ್ ದೋಷ ಮುಕ್ತರಾಗಿದ್ದಾರೆ.ತಮ್ಮ ಮೇಲಿನ ಕಳಂಕ ತೊಳೆದುಕೊಂಡು, ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಆಸ್ಟ್ರೇಲಿಯಾ ವಿಚಾರಣಾ ಮಂಡಳಿ ಮುಖ್ಯಸ್ಥರು,ಹನೀಫ್ ವಿರುದ್ಧದ ದೂರು ಮತ್ತು ಆರೋಪಗಳನ್ನು ಶುಕ್ರವಾರ ಕೈಬಿಟ್ಟಿವೆ.
27ವರ್ಷದ ಹನೀಫ್ ವಿರುದ್ಧ ಕೋರ್ಟ್ ನಲ್ಲಿ ಹೂಡಲಾಗಿದ್ದ ಹೂಡಲಾಗಿದ್ದ ಕೇಸುಗಳನ್ನು, ಈಗ ವಾಪಸ್ ಪಡೆಯಲಾಗಿದೆ. ತಪ್ಪು ಗ್ರಹಿಕೆಯಿಂದ, ಹನೀಫ್ ಅವರನ್ನು ದೋಷಿಗಳೆಂದು ಪರಿಗಣಿಸಲಾಗಿತ್ತು. ಈಗ ತಪ್ಪು ಮನವರಿಕೆಯಾಗಿದೆ. ತನಿಖೆ ಎಡವಿದ್ದೆಲ್ಲಿ ಎಂಬ ಬಗ್ಗೆ ವಿಚಾರಣೆ ನಡೆಸುವುದಾಗಿ ವಿಚಾರಣಾ ಮಂಡಳಿ ಹೇಳಿದೆ.
ಭಯೋತ್ಪಾದಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವೈದ್ಯ ಹನೀಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.ಲಂಡನ್ ಮತ್ತು ಗ್ಲಾಸ್ಗೋ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.2ರಂದು ಹನೀಫ್ ನನ್ನು ಬಂಧಿಸಲಾಗಿತ್ತು. ಕಳೆದ 3ವಾರಗಳಿಂದ ಅವರು ಮಾನಸಿಕವಾಗಿ ಬಳಲಿದ್ದರು.
(ಏಜನ್ಸೀಸ್)
ಪೂರಕ ಓದಿಗೆ :
ವಿಚಾರಣೆಯ ನಂತರ ಹನೀಫ್ ಮೊಹಮ್ಮದ್ ಭಾರತಕ್ಕೆ
ಹನೀಫ್ ಮೊಹಮ್ಮದ್ ಬಿಡುಗಡೆ : ಕಭಿ ಹಾ, ಕಭಿ ನಾ!
ಅಂತೂ ಡಾ.ಹನೀಫ್ ಅಹಮದ್‌ಗೆ ಷರತ್ತಿನ ಜಾಮೀನು!
ಬಿಡುಗಡೆಯಾಗಬೇಕಿದ್ದ ಹನೀಫ್ ವಿರುದ್ಧ ಆರೋಪಪಟ್ಟಿ
ಗ್ಲಾಸ್ಗೋ ದಾಳಿ : ಕಫೀಲ್ ಸಂಬಂಧಿ ಹನೀಫ್ ನಿರಪರಾಧಿ












Click it and Unblock the Notifications