ಆಗುಂಬೆ ಘಟ್ಟ ಬಿಟ್ಟು ಬೆಳ್ತಂಗಡಿಗೆ ಹೋದರಾ ನಕ್ಸಲರು?

ಪುತ್ತೂರು, ಜುಲೈ20 : ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಕ್ರಿಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಕ್ಸಲರು, ದಕ್ಷಿಣ ಕನ್ನಡ ಜಿಲ್ಲೆಯ ಕಡೆ ಮುಖ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕದ ಮನೆಯೊಂದಕ್ಕೆ ತೆರಳಿ ಮನೆಯವರನ್ನು ಬೆದರಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಚಂದ್ರಶೇಖರ್ ಗೋರೆ ಎಂಬುವರ ಮನೆಗೆ ಭೇಟಿ ಕೊಟ್ಟ ನಕ್ಸಲರು, ಹಣ ಹಾಗೂ ಬೆಂಬಲ ಕೋರಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಆದರೆ , ನಕ್ಸಲರ ಬೆದರಿಕೆಗೆ ಸೊಪ್ಪುಹಾಕದೆ ಚಂದ್ರಶೇಖರ್ ಬಾಗಿಲು ಭದ್ರಪಡಿಸಿ ಪ್ರತಿರೋಧ ತೋರಿದ್ದಾರೆ.

ಅಪರ ವೇಳೆಯಲ್ಲಿ ಬಂದಿದ್ದ ಈ ಗುಂಪು, ಅಲ್ಲಿಂದ ತೆರಳುವ ಮುನ್ನ "ನಕ್ಸಲರಿಗೆ ಜಯವಾಗಲಿ, ಕಲ್ಗುಳಿ ವಿಠಲ ಹೆಗ್ಡೆಗೆ ಹಣ ನೀಡಿ" ಎಂದು ಮಸಿಯಿಂದ ಗೋಡೆಯ ಮೇಲೆ ಬರೆದು ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಹತ್ಯಡ್ಕ, ಕಳೆಂಜೆಯಲ್ಲಿ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ದಳ ತೀವ್ರ ಶೋಧ ನಡೆಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+