ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋ ಎಕ್ಸ್ಯೂಸ್ : ಲೈಂಗಿಕ ಕಿರುಕುಳಕ್ಕೆ ಸಾಫ್ಟ್‌ವೇರ್ ಬಾಣ!

By Staff
|
Google Oneindia Kannada News

ಬೆಂಗಳೂರು, ಜುಲೈ 17 : ಕಚೇರಿಯಲ್ಲಿ ಸಹೋದ್ಯೋಗಿಗಳು ನೀಡುತ್ತಿರುವ ಲೈಂಗಿಕ ಕಿರುಕುಳವನ್ನು ಸಹಿಸಿಕೊಂಡು, ಯಾರಿಗೂ ದೂರು ನೀಡಲಾಗದೆ ಒದ್ದಾಡುತ್ತಿರುವಿರಾ? ಹಾಗಿದ್ದರೆ, ಸ್ವಲ್ಪ ತಾಳಿ. ಇಲ್ಲಿದೆ ಉತ್ತಮ ಮಾರ್ಗದರ್ಶಿ.

ಲೈಂಗಿಕ ಕಿರುಕುಳವೆಂದರೆ ಏನು? ಅದನ್ನು ಗುರುತಿಸುವುದ ಹೇಗೆ? ಕಿರುಕುಳವನ್ನು ಡಿಪ್ಲೋಮ್ಯಾಟಿಕ್ ಆಗಿ ಹೇಗೆ ನಿಭಾಯಿಸುವುದು? ಲೈಂಗಿಕ ಕಿರುಕುಳಕ್ಕೆ ಆಸ್ಪದವೇ ನೀಡದಂತಹ ವಾತಾವರಣವನ್ನು ಕಚೇರಿಯಲ್ಲಿ ಹೇಗೆ ನಿರ್ಮಿಸಿಕೊಳ್ಳುವುದು? ಇವಕ್ಕೆ ಉತ್ತರ ನೋ ಎಕ್ಸ್ಯೂಸ್.

ಈ-ಕಲಿಕೆ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ತರಂಗ್ ಸಾಫ್ಟ್‌ವೇರ್ ಟೆಕ್ನಾಲಜಿ ಲೈಂಗಿಕ ಕಿರುಕುಳ ನಿಭಾವಣಾ ಈ-ಹೊತ್ತಗೆಯನ್ನು ರೂಪಿಸಿದೆ. ಇಂಟರ್ವೀವ್ ಕಂಪನಿಗಾಗಿ ಈ-ಪಠ್ಯವನ್ನು ತರಂಗ್ ತಯಾರಿಸಿದೆ.

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ, ಸಂಕೀರ್ಣ ವಿಷಯಗಳನ್ನು ಅತ್ಯಂತ ಸರಳವಾಗಿ ತಿಳಿದುಕೊಂಡು ಸುರಕ್ಷಿತ ಮತ್ತು ಗೌರವಯುತ ವಾತಾವರಣವನ್ನು ನಿರ್ಮಿಸಿಕೊಳ್ಳಲು ನೋ ಎಕ್ಸ್ಯೂಸ್ ಸಹಕಾರಿಯಾಗಲಿದೆ ಎಂದು ತರಂಗ್‌ನ ಸಿಇಓ ವಿ.ರಾಮಕುಮಾರ್ ಮಂಗಳವಾರ ತಿಳಿಸಿದರು.

ನೋ ಎಕ್ಸ್ಯೂಸನ್ನು ಭಾರತದಲ್ಲಿ ಕೆಲಸ ಮಾಡುವ ನೌಕರರಿಗಾಗಿಯೇ ವಿಶೇಷವಾಗಿ ರೂಪಿಸಲಾಗಿದೆ. ನೈಜ ಘಟನಾವಳಿಗಳಿಂದ ಕೂಡಿರುವ ಈ-ಪಠ್ಯ, ಲೈಂಗಿಕ ಕಿರುಕುಳವನ್ನು ತಡೆಗಟ್ಟಿ ಸಂಬಂಧಿಸಿದ ಅಧಿಕಾರಿಗೆ ದೂರು ನೀಡುವ ಸೂಕ್ತ ಮಾರ್ಗದರ್ಶನಗಳನ್ನು ಒಳಗೊಂಡಿದೆ.

ಭಾರತದಲ್ಲಿ ಇದು ಯಾವ ರೀತಿ ಸ್ವೀಕೃತವಾಗುತ್ತದೆಂಬುದನ್ನು ಗಮನಿಸಿ ಇನ್ನೂ ಉತ್ತಮ ಸಾಫ್ಟ‌ವೇರನ್ನು ನಿರ್ಮಿಸುವ ಉದ್ದೇಶವನ್ನು ತರಂಗ ಹೊಂದಿದೆ. ಮಹಿಳೆಯರು ಮಾತ್ರವಲ್ಲ ಪುರುಷವರ್ಗ ಕೂಡ ಇದರ ಲಾಭವನ್ನು ಪಡೆಯಬಹುದು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X