ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಾರಣೆಯ ನಂತರ ಹನೀಫ್ ಮೊಹಮ್ಮದ್ ಭಾರತಕ್ಕೆ

By Staff
|
Google Oneindia Kannada News

Haneef is likely to be deported to Indiaನವದೆಹಲಿ, ಜುಲೈ 17 : ವಿಚಾರಣೆಯ ನಂತರ ಡಾಕ್ಟರ್ ಹನೀಫ್ ಮೊಹಮ್ಮದ್‌ರನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಆಸ್ಟ್ರೇಲಿಯಾದ ವಲಸೆ ಸಚಿವ ಕೆವಿನ್ ಆಂಡ್ಯೂಸ್ ಹೇಳಿದ್ದಾರೆ.

ಈಗ ದೊರೆತಿರುವ ಮಾಹಿತಿಗೆ ಹೊರತಾಗಿ ಹೊಸತೇನಾದರೂ ದೊರೆತರೆ ಮಾತ್ರ ಅವರನ್ನು ಉಳಿಸಿಕೊಳ್ಳಲಾಗುವುದು. ಕೆಲಸದ ವೀಸಾವನ್ನು ಹಿಂಪಡೆದಿರುವುದರಿಂದ ಯಾವುದೇ ಕಾರಣಕ್ಕೂ ಹನೀಫ್‌ರನ್ನು ಆಸ್ಟ್ರೇಲಿಯಾದಲ್ಲಿ ಇರಿಸಿಕೊಳ್ಳಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನೆಗೆ ಪರೋಕ್ಷವಾಗಿ ಮಾಹಿತಿ ನೀಡಿರುವ ಆರೋಪ ಹೊತ್ತಿರುವ ಹನೀಫ್‌ರಿಗೆ ಸೋಮವಾರ ಆಸ್ಟ್ರೇಲಿಯಾ ನ್ಯಾಯಾಲಯ ಜಾಮೀನು ನೀಡಿದ್ದರೂ, ಕೆಲ ಗಂಟೆಗಳಲ್ಲಿಯೇ ಅವರ ವೀಸಾವನ್ನು ಕಿತ್ತುಕೊಂಡು ಬಂಧಿಸಲಾಗಿತ್ತು.

ಸದ್ಯಕ್ಕೆ ಅವರನ್ನು ವಲಸೆ ಕಾನೂನಿನಡಿ ಬ್ರಿಸ್ಬೇನ್‌ನ ನಿರೀಕ್ಷಣಾ ಗೃಹದಲ್ಲಿ ಬಂಧನದಲ್ಲಿಡಲಾಗಿದೆ.

ಯಾವುದೇ ಕ್ಷುಲ್ಲಕ ಕಾರಣಕ್ಕೆ ಅವರನ್ನು ವಲಸೆ ಬಂಧನದಲ್ಲಿಡಲಾಗಿಲ್ಲ. ಬೇಕಾದರೆ ಹನೀಫ್‌ರ ವಕೀಲರಿಗೆ ದಾಖಲೆಗಳನ್ನು ಒದಗಿಸಲಾಗುವುದು ಎಂದು ಕೆವಿನ್ ಹೇಳಿದ್ದಾರೆ.

(ಏಜೆನ್ಸಿ)

ಪೂರಕ ಓದಿಗೆ :
ಹನೀಫ್ ಮೊಹಮ್ಮದ್ ಬಿಡುಗಡೆ : ಕಭಿ ಹಾ, ಕಭಿ ನಾ!
ಅಂತೂ ಡಾ.ಹನೀಫ್‌ ಅಹಮದ್‌ಗೆ ಷರತ್ತಿನ ಜಾಮೀನು!
ಬಿಡುಗಡೆಯಾಗಬೇಕಿದ್ದ ಹನೀಫ್ ವಿರುದ್ಧ ಆರೋಪಪಟ್ಟಿ
ಗ್ಲಾಸ್ಗೋ ದಾಳಿ : ಕಫೀಲ್ ಸಂಬಂಧಿ ಹನೀಫ್ ನಿರಪರಾಧಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X