ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಸುನೀತಾ ವಿಲಿಯಮ್ಸ್ ಭೇಟಿ?

Sunita Williams may come for Hyderabad astronautical congressಹೈದರಾಬಾದ್, ಜುಲೈ.13 : ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 58ನೇ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ, ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಆಗಮಿಸುವ ನಿರೀಕ್ಷೆಯಿದೆ.

ಭಾರತಕ್ಕೆ ಬರುವ ಬಗ್ಗೆ ಸುನೀತಾ ವಿಲಿಯಮ್ಸ್ ಖಚಿತವಾಗಿ ಪ್ರತಿಕ್ರಿಯೆ ನೀಡಿಲ್ಲದಿದ್ದರೂ, ಅವರ ಆಗಮನ ಬಹುಪಾಲು ಖಚಿತ ಎಂದುಆಯೋಜಕರು ಹೇಳಿದ್ದಾರೆ.

ಸೆಪ್ಟೆಂಬರ್ 24 ರಿಂದ 28ರ ವರೆಗೆ ನಡೆಯುವ ಈ ವಿಜ್ಞಾನ ಸಮಾವೇಶದಲ್ಲಿ ನಾಸಾ(NASA)ದ ವ್ಯವಸ್ಥಾಪಕ ಮೈಕಲ್ ಗ್ರಿಫಿನ್ ಸೇರಿದಂತೆ 24 ಖಗೋಳ ಕೇಂದ್ರಗಳ ವಿಜ್ಞಾನಿಗಳು,ವಿಶ್ವ ದರ್ಜೆಯ ಸಂಶೋಧಕರು ಮುಂತಾದ ಆಸಕ್ತರು ಪಾಲ್ಗೊಳ್ಳಲಿದ್ದಾರೆ.

ಈ ಸಮಾವೇಶವನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಕೇಂದ್ರ(ISRO) ಹಾಗೂ ಭಾರತೀಯಖಗೋಳ ಕೇಂದ್ರ(ASI) ಜಂಟಿಯಾಗಿ ಆಯೋಜಿಸಿವೆ. ಹೈದರಾಬಾದಿನ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ(HICC)ಯಲ್ಲಿ ಈ ಸಮ್ಮೇಳನ ನಡೆಯಲಿದೆ.

ಸಮಾವೇಶಕ್ಕೆ ವಿಶ್ವದೆಲ್ಲೆಡೆಯಿಂದ 2.500 ಖಗೋಳ ಶಾಸ್ತ್ರಜ್ಞರು, ವಿದ್ಯಾರ್ಥಿಗಳನ್ನು ನಿರೀಕ್ಷಿಸಲಾಗಿದೆ ಎಂದು ರಾಷ್ಟ್ರೀಯ ದೂರ ಸಂವೇದಿ ಕೇಂದ್ರ(NRSA)ದ ನಿರ್ದೇಶಕ ಕೆ. ರಾಧಾಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದರು.

ಭಾರತದಲ್ಲಿ ಈ ಮುಂಚೆ ಅಂತಾರಾಷ್ಟ್ರೀಯ ಖಗೋಳವಿಜ್ಞಾನ ಸಮಾವೇಶ ಬೆಂಗಳೂರಿನಲ್ಲಿ 1988ರಲ್ಲಿ ಜರುಗಿತ್ತು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+