ಗ್ಲಾಸ್ಗೋ ದಾಳಿ : ಕಫೀಲ್ ಸಂಬಂಧಿ ಹನೀಫ್ ನಿರಪರಾಧಿ
ಬೆಂಗಳೂರು, ಜುಲೈ 13 : ಲಂಡನ್‌ನ ಗ್ಲಾಸ್ಗೋ ವಿಮಾನ ನಿಲ್ದಾಣ ಸ್ಫೋಟಕ್ಕೆ ಸಂಚು ಹೂಡಿದ ಆರೋಪ ಹೊತ್ತಿದ್ದ ಡಾಕ್ಟರ್ ಹನೀಫ್ ನಿರಪರಾಧಿ ಎಂದು ಸಾಬೀತಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಹನೀಫ್ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಹನೀಫ್‌ರನ್ನು ಸೋಮವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಬ್ರಿಟಿಷ್ ಪೊಲೀಸರ ಕೋರಿಕೆಯ ಮೇರೆಗೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ 10 ದಿನಗಳ ಹಿಂದೆ 27 ವರ್ಷದ ಹನೀಫ್‌ರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿತ್ತು. ಆದರೆ, ಹನೀಫ್ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯ ದೊರೆಯದ ಕಾರಣ ಅವರ ಬಂಧನ ಮುಂದುವರಿಸಲು ಯಾವುದೇ ಒತ್ತಾಯ ಹೇರದಿರಲು ಅದು ನಿರ್ಧರಿಸಿದೆ.
ನಮಗೆ ತುಂಬಾ ಸಂತೋಷವಾಗಿದೆ. ಭಾರತದ ಮತ್ತು ಆಸ್ಟ್ರೇಲಿಯಾ ಮಾಧ್ಯಮದವರನ್ನು ಅಭಿನಂದಿಸುತ್ತೇವೆ. ಬಿಡುಗಡೆ ಹೊಂದುವ ವಿಶ್ವಾಸ ಹನೀಫ್‌ಗೆ ಖಂಡಿತ ಇತ್ತು ಎಂದು ಹೇಳುವಾಗ ಹನೀಫ್‌ರ ಮಡದಿ ಫಿರ್ದೌಸ್‌ರ ಮೊಗದಲ್ಲಿ ಆನಂದ ಉಕ್ಕಿಹರಿಯುತ್ತಿತ್ತು.
ಹನೀಫ್‌ರ ಸಹೋದರ ಶೋಯಾಬ್ ಕೂಡ, ಇಡೀ ಕುಟುಂಬಕ್ಕೆ ಸಂತಸವಾಗಿದೆ. ಆದರೆ, ಹನೀಫ್ ಬಿಡುಗಡೆ ನಂತರವೇ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.
ಗ್ಲಾಸ್ಗೋ ವಿಮಾನ ನಿಲ್ದಾಣ ಉಡಾಯಿಸುವ ವಿಫಲ ಪ್ರಯತ್ನದ ನಂತರ ಸಂಚಿಗೆ ಪ್ರಮುಖ ಕಾರಣರಾದ ಕಫೀಲ್ ಮತ್ತು ಸಬೀಲ್‌ರನ್ನು ಬಂಧಿಸಲಾಗಿತ್ತು. ಹನೀಫ್‌ರ ಸಿಮ್ ಕಾರ್ಡನ್ನು ಅವರ ಸಂಬಂಧಿಯಾದ ಕಫೀಲ್ ಬಳಸಿದ್ದಕ್ಕಾಗಿ ಹನೀಫ್ ಕೂಡ ಸಂಚಲ್ಲಿ ಭಾಗಿಯಾಗಿರಬಹುದೆಂದು ಅವರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿತ್ತು.
(ಯುಎನ್‌ಐ)











Click it and Unblock the Notifications