ಓ ಮೈ ಗಾಡ್! ಇದು 13ನೇ ತಾರೀಖಿನ ಶುಕ್ರವಾರ!
ಬೆಂಗಳೂರು,ಜುಲೈ 13: ಇಂದು ಶುಕ್ರವಾರ. ಶುಭ ಶುಕ್ರವಾರ ಎಂದು ಕೆಲವರು ಲಕ್ಷ್ಮೀದೇವಿಗೆ ಅಡ್ಡಡ್ಡ ಕೈಮುಗಿಯುತ್ತಾರೆ. ಆದರೆ ಇಂದಿನ ಶುಕ್ರವಾರವನ್ನು ದುರದೃಷ್ಟದ ದಿನ ಎಂದು ಗುರ್ತಿಸಲಾಗುತ್ತಿದೆ! ಯಾಕೆಂದರೆ, ಇದು 13ನೇ ತಾರೀಖಿನ ಶುಕ್ರವಾರ!
ಯಾವುದೇ ತಿಂಗಳಾದರೂ ಸರಿಯೇ, ತಿಂಗಳಿನ 13ನೇ ತಾರೀಖು ಶುಕ್ರವಾರ ಬಂದರೆ, ಜಗತ್ತಿನಲ್ಲಿ ಕೆಲವರು ಬೆಚ್ಚಿಬೀಳುತ್ತಾರೆ! ಈ ದಿನ ಏನೋ ಒಂದು ಅನಿಷ್ಠ ಆಗುತ್ತದೆ. ಬದುಕಿಗೆ ನೋವು ತರುತ್ತದೆ ಎಂಬ ಆತಂಕ ಅನೇಕರದು. ಕೆಲವರ ಮನದಲ್ಲಿ ಏನೋ ಒಂದು ರೀತಿಯ ದಿಗಿಲು!
13ನೇ ತಾರೀಖಿನ ಶುಕ್ರವಾರವನ್ನು ದುರದೃಷ್ಟದ ದಿನವೆಂದೇ ಇಂಗ್ಲಿಷರು, ಜರ್ಮನ್ನರು, ಪೋರ್ಚುಗೀಸರು ಭಾವಿಸುತ್ತಾರೆ. ಅದೇ ರೀತಿ ಗ್ರೀಸ್ ಮತ್ತು ಸ್ಪೈನ್ ದೇಶದ ಮಂದಿಗೆ, ಮಂಗಳವಾರ 13ನೇ ತಾರೀಖು ಬಂದರೆ ಬೇಸರ ಮತ್ತು ಭಯ.
ಬ್ರಿಟನ್‌ನ ವೈದ್ಯಕೀಯ ಅಧ್ಯಯನವೊಂದು ಹೇಳುವ ಪ್ರಕಾರ ರಸ್ತೆ ಅಪಘಾತಗಳು 13ರ ಶುಕ್ರವಾರ ಹೆಚ್ಚಿವೆಯಂತೆ! ಇದು ಕಾಕತಾಳೀಯವೋ? 13ರ ಅವಕೃಪೆಯೋ? ನಂಬಿಕೆಯೋ? ನಂಬಿಕೆ ಮೀರಿದ ಮೂಢನಂಬಿಕೆಯೋ?
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications