ಕೂದಲೆಳೆ ಅಂತರದಲ್ಲಿ ಮುಷರಫ್ ಹತ್ಯೆ ಪ್ರಯತ್ನ ವಿಫಲ!

ಇಸ್ಲಾಮಾಬಾದ್ : ಪಾಕಿಸ್ತಾನದ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ಹತ್ಯೆಗೆ ಶುಕ್ರವಾರ ಮಧ್ಯಾಹ್ನ ವಿಫಲ ಪ್ರಯತ್ನವೊಂದು ನಡೆದಿದೆ.

ಪಾಕಿಸ್ತಾನದ ಜಲಾವೃತ ಪ್ರದೇಶಗಳ ವೀಕ್ಷಣೆಗಾಗಿ ಮುಷರಫ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ವಿಮಾನದ ಮೇಲೆ ರಾಕೆಟ್ ದಾಳಿ ಮಾಡುವ ಹುನ್ನಾರ ವಿಫಲಗೊಂಡಿದೆ.

ರಾವಲ್ ಪಿಂಡಿಯ ಮನೆಯೊಂದರಲ್ಲಿ ರಾಕೆಟ್ ಸಂಚು ನಡೆದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ಆ ಮನೆಗೆ ತೆರಳುವ ಹೊತ್ತಿಗೆ, ಅಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಆ ಮನೆಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಮಾನ ಯಾವುದೇ ಆಘಾತಕ್ಕೊಳಗಾಗದೇ ಬಲುಚಿಸ್ತಾನದಲ್ಲಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+