ಕಾಮೆಡ್-ಕೆ ಸೀಟು: 8 ವಿದ್ಯಾರ್ಥಿಗಳಿಗೆ ಗೇಟ್ ಪಾಸ್
ಬೆಂಗಳೂರು : ಪ್ರವೇಶ ಪರೀಕ್ಷೆ ಸಮಯದಲ್ಲಿ ನಕಲಿ ದಾಖಲೆಯನ್ನು ನೀಡಿದ ಕಾರಣ 8 ವಿದ್ಯಾರ್ಥಿಗಳನ್ನು ಕಾಮೆಡ್ ಕೆ ಸೀಟು ಹಂಚಿಕೆ ಪ್ರಕ್ರಿಯೆಯ ಪ್ರಾರಂಭದ ಹಂತದಲ್ಲೇ ಗುರುತಿಸಿ, ಹೊರಕ್ಕೆ ಕಳುಹಿಸಲಾಗಿದೆ.
ನಕಲಿದಾಖಲೆ ನೀಡಿದವರು ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದ್ದು, ಅವರ ಬೆರಳಚ್ಚು ಪ್ರತಿ ಅರ್ಜಿಯೊಂದಿಗೆ ಹೊಂದಾಣಿಕೆ ಆಗಿರಲಿಲ್ಲ ಹಾಗೂ ಒಬ್ಬರ ಭಾವಚಿತ್ರ ಬದಲಾಗಿತ್ತು ಎಂದು ಕಾಮೆಡ್ ಕೆನ ಹಿರಿಯ ಅಧಿಕಾರಿ ಹೇಳಿದ್ದಾರೆ.
ಸೀಟು ಹಂಚಿಕೆ : ಗುರುವಾರ ಪ್ರಾರಂಭವಾದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಒಟ್ಟು 900 ಸೀಟುಗಳು ಆಯ್ಕೆ ಗೆ ಸಿದ್ಧವಿದೆ.ಆದರೆ ಸರ್ಕಾರಿ ಸಿಇಟಿ ಮೂಲಕ ಸೀಟು ಆಯ್ಕೆ ಮಾಡಿಕೊಂಡಅನೇಕ ವಿದ್ಯಾರ್ಥಿಗಳು ಕಾಮೆಡ್ ಕೆ ಸೀಟು ಆಯ್ಕೆ ಪ್ರಕ್ರಿಯೆಗೆ ಹಾಜರಿರಲಿಲ್ಲ. ಹಾಜರಿದ್ದವರಲ್ಲಿ ಶೇ.70 ರಷ್ಟು ಮಂದಿ ಹೊರರಾಜ್ಯದವರಾಗಿದ್ದರು.
ಕಾಮೆಡ್ ಕೆ ಮೂಲಕ ಮೊದಲ ಮೆಡಿಕಲ್ ಸೀಟು ಪಡೆದ ಅಭ್ಯರ್ಥಿ ಕೆಂಪೇಗೌಡ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications