ಸದ್ಯದಲ್ಲಿಯೇ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳದ ಶಾಕ್?
ಬೆಂಗಳೂರು : ವಿದ್ಯುತ್ ಶಾಕ್‌ಗೆ ಗ್ರಾಹಕರು ಈಗಲೇ ಮಾನಸಿಕವಾಗಿ ಸಿದ್ಧರಾದರೆ ಒಳ್ಳೆಯದು!
ಪ್ರತಿ ಯೂನಿಟ್ ವಿದ್ಯುತ್‌ಗೆ 90 ಪೈಸೆ ದರ ಹೆಚ್ಚಿಸಲು, ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳು ಚಿಂತನೆ ನಡೆಸಿವೆ. ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ)ಕ್ಕೆ ಮನವಿ ಸಲ್ಲಿಸಿವೆ.
ವಿದ್ಯುತ್ ಕಂಪನಿಗಳು 1800ಕೋಟಿ ರುಪಾಯಿ ಕೊರತೆಯನ್ನು ತುಂಬಿಸಿಕೊಳ್ಳಲು ದರ ಹೆಚ್ಚಳದ ಪ್ರಸ್ತಾಪವನ್ನು ಮುಂದಿಟ್ಟಿವೆ. ಕೃಷಿ ಪಂಪ್‌ಸೆಟ್, ಭಾಗ್ಯಜ್ಯೋತಿ ಹೊರತು ಪಡಿಸಿ, ಉಳಿದ ಎಲ್ಲಾ ಗ್ರಾಹಕರಿಗೆ ದರ ಪರಿಷ್ಕರಣೆ ಅನ್ವಯವಾಗುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications