ನೂತನ ವಲಸೆ ನೀತಿಗೆ ಅಮೆರಿಕ ಸಂಸತ್ತಿನಲ್ಲಿ ತೀವ್ರ ಹಿನ್ನಡೆ
ವಾಷಿಂಗ್ಟನ್ : ನೂತನ ವಲಸೆ ನೀತಿಗೆ ಅಮೆರಿಕ ಸಂಸತ್ತಿನಲ್ಲಿ ಅನುಮೋದನೆ ಸಿಗದ ಕಾರಣ, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ಗೆ ತೀವ್ರ ನಿರಾಸೆಯಾಗಿದೆ.
ಸೆನೆಟ್‌ನಲ್ಲಿ ವಲಸೆ ವಿಧೇಯಕ ಮಂಡನೆಯಾದ ನಂತರ, ಪರ-ವಿರೋಧ ಮತಗಳನ್ನು ಚಲಾಯಿಸಲಾಯಿತು. ಸೆನೆಟ್ ನಿಯಮದ ಪ್ರಕಾರ ವಿಧೇಯಕವನ್ನು ಮಂಜೂರು ಮಾಡಲು 60 ಮತಗಳ ಅವಶ್ಯಕತೆ ಇತ್ತು. ಆದರೆ ಹೊಸ ವಿಧೇಯಕದ ಪರ 45 ಮತಗಳ ಮಾತ್ರ ದಾಖಲಾದವು.
ಡೆಮೊಕ್ರಟಿಕ್ ಪಕ್ಷದವರು, ಈ ನೂತನ ನೀತಿಯಿಂದ 12 ಮಿಲಿಯನ್ ವಲಸಿಗರನ್ನು ನಿರೀಕ್ಷಿಸಬಹುದು... ಗಡಿ ಭದ್ರತೆ, ಅತಿಥಿ -ಕೆಲಸಗಾರ ವ್ಯವಸ್ಥೆ ಮುಂತಾದ ಯೋಜನೆಗಳು ಪ್ರಯೋಜನಕಾರಿ ಎಂದು ವಾದಿಸಿದರು. ರಿಪಬ್ಲಿಕ್‌ನ ಸದಸ್ಯರು, ಹೊಸ ನೀತಿ ಕಾನೂನು ರೀತ್ಯ ಸರಿಯಾಗಿಲ್ಲ, ಗಡಿ ಭದ್ರತೆಗೂ ಒತ್ತು ನೀಡಿಲ್ಲ ಎಂದು ಪ್ರತಿವಾದ ಹೂಡಿದರು.
ವಿಶೇಷವೆಂದರೆ, ರಿಪಬ್ಲಿಕ್ ಪಕ್ಷದ ಕೆಲವರಿಂದ ಹೊಸ ವಲಸೆ ನೀತಿಗೆ ಪರವಾಗಿ ಮತಗಳು ಬಂದಿದೆ. ಆದರೆ ಡೆಮೊಕ್ರಟಿಕ್ ಪಕ್ಷದ ಹಲವರು ವಿಧೇಯಕದ ವಿರುದ್ಧ ಮತ ಚಲಾಯಿಸಿರುವುದು ಕಂಡು ಬಂದಿದೆ ಎನ್ನುತ್ತಾರೆ ನೂತನ ವಿಧೇಯಕವನ್ನು ವಿನ್ಯಾಸಗೊಳಿಸಿದ ಎಡ್ವರ್ಡ್ ಎಂ. ಕೆನಡಿ.
(ಏಜನ್ಸೀಸ್)












Click it and Unblock the Notifications