ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಸ್‌ಕಲಿಕೆಗೆ ಆನ್‌ಲೈನ್‌ ಅಕಾಡೆಮಿ

By Super
|
Google Oneindia Kannada News

ಪ್ರತಿಭಾವಂತ ಬಾಲ ಚೆಸ್‌ಪ್ರತಿಭೆಗಳಿಗೆ ಅನುಕೂಲವಾಗಲೆಂದು ಆನ್‌ಲೈನ್‌ ಚೆಸ್‌ ಅಕಾಡೆಮಿ ಶುರು ಮಾಡುವುದಾಗಿ ವಿಶ್ವ ಚೆಸ್‌ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ಹೇಳಿದ್ದಾರೆ.

ಭಾರತೆದೆಲ್ಲೆಡೆಯಲ್ಲಿರುವ ಚೆಸ್‌ ಕಲಿಯಲು ಬಯಸುವ ಉತ್ಸಾಹಿಗಳಿಗೆ ಎನ್‌ಐಐಟಿ ಹಾಗೂ ತಮ್ಮ ಪತ್ನಿ ಅರುಣಾ ವರ್ಮಾರವರ ಸಹಕಾರದೊಂದಿಗೆ ಏಕಕಾಲಕ್ಕೆ ಬೋಧನೆ ಹಾಗೂ ಕುಶಲ ತಂತ್ರಾಂಶವನ್ನು ಹೇಳಿಕೊಡಲು ವಿಶ್ವನಾಥನ್‌ ಆನಂದ್‌ ಮುಂದಾಗಿದ್ದಾರೆ.

ದೇಶದ ವಿವಿದೆಡೆಯಲ್ಲಿನ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಬೊಧನೆ ಮಾಡುವ ವಿಧಾನವನ್ನು ಅಹಮದಾಬಾದಿನ ಐಐಎಂ ವಿದ್ಯಾಸಂಸ್ಥೆಯಲ್ಲಿ ಅಳವಡಿಸಿ ಎನ್‌ಐಐಟಿ ಯಶಸ್ವಿಯಾದ ಹಿನ್ನೆಲೆಯಲ್ಲಿ ವಿಶ್ವನಾಥನ್‌ಆನಂದ್‌ರವರ ಆನ್‌ಲೈನ್‌ ಚೆಸ್‌ ಅಕಾಡೆಮಿ ಸ್ಥಾಪನೆಗೆ ಸಹಕಾರ ನೀಡಲು ಮುಂದಾಗಿದೆ.

ಬಿಎಸ್‌ಎನ್‌ಎಲ್‌ ರೋಮಿಂಗ್‌ ಶುಲ್ಕ ಇಳಿಕೆ

ಬಿಎಸ್‌ಎನ್‌ಎಲ್‌ ಮೊಬೈಲ್‌ಗಳ ಒಳ ಬರುವ ಕರೆಗಳ ಶುಲ್ಕ ಇಳಿಸಲಾಗಿದೆ. ಪ್ರತಿ ಒಂದು ನಿಮಿಷಕ್ಕೆ ಒಳಬರುವ ಕರೆಗಳಿಗೆ 1 ರೂ. ಹಾಗೂ ಹೊರ ಹೋಗುವ ಕರೆಗಳಿಗೆ 1.50 ರೂ ಎಂದು ದರಗಳನ್ನು ನಿಗದಿಪಡಿಸಲಾಗಿದೆ.

1ಲಕ್ಷ ಮಾನವ ಬಾಂಬ್‌ ರೆಡಿ!

ಪಾಕಿಸ್ತಾನದಲ್ಲಿ ಪ್ರಸ್ತುತ 1ಲಕ್ಷಕ್ಕೂ ಅಧಿಕ ಮಾನವ ಬಾಂಬ್‌ಗಳಿದ್ದು, ಯಾವುದೇ ಕ್ಷಣದಲ್ಲಿ ಪ್ರಾಣ ನೀಡಲು ಮಾನವ ಬಾಂಬ್‌ಗಳು ಸಜ್ಜಾಗಿವೆ ಎಂದು ಪಾಕ್‌ ಕೆಂಪು ಮಸೀದಿಯ ಮೌಲ್ವಿ ಅಬ್ದುಲ್‌ ಅಜೀಜ್‌ ಹೇಳಿದ್ದಾರೆ. ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೇಲ್ಕಂಡ ಅಂಶವನ್ನು ಸ್ಪಷ್ಪಪಡಿಸಿದ್ದಾರೆ.

ನಮ್ಮ ವ್ಯಾಪ್ತಿಯ ಎರಡು ಮದರಸಾಗಳಲ್ಲೇ ಸುಮಾರು 10ಸಾವಿರ ಯುವಕರು ಆತ್ಮಹತ್ಯಾದಾಳಿಗೆ ಸಜ್ಜಾಗಿದ್ದಾರೆ. ಇರಾಕ್‌ ಮತ್ತು ಆಫ್ಘಾನಿಸ್ತಾನದಲ್ಲಿನ ತಾಲಿಬಾನ್‌-ಆಲ್‌ ಖೈದಾ ಉಗ್ರರ ಬಗ್ಗೆ ಪಾಕಿಸ್ತಾನ ಸರ್ಕಾರ ಅಸಹನೆ ಪ್ರದರ್ಶಿಸಿದೆ. ಈ ಧೋರಣೆಯಿಂದ ಕೆರಳಿ ಯುವಕರು ಮಾನವ ಬಾಂಬ್‌ಗಳಾಗಿ ಪರಿವರ್ತನೆಯಾಗಿದ್ದಾರೆ ಎಂದು ಅಬ್ದುಲ್‌ ಅಜೀಜ್‌ ಹೇಳಿದ್ದಾರೆ.

ಲಾಲ್‌ಬಾಗ್‌ನಲ್ಲಿ ಮಾವು ಮೇಳ

ಜೂನ್‌ 1ರಿಂದ ಜೂನ್‌ 15ರವರೆಗೆ ಸುಮಾರು 120 ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟವನ್ನು ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 8ರಿಂದ ರಾತ್ರಿ 8ಗಂಟೆವರೆಗೆ ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ಮಾವಿನ ಮೇಳ ನಡೆಯಲಿದ್ದು, ಇದಕ್ಕೆ ಪ್ರತ್ಯೇಕ ಪ್ರವೇಶ ದರವನ್ನು ತೆರಬೇಕಾಗಿಲ್ಲ. ಟಿಪ್ಪೂ ಸುಲ್ತಾನನ ಕಾಲದ ಮರಗಳ ಮಾವು ಕೂಡ ಇಲ್ಲಿದೆ.

ಈ ಮೇಳದಿಂದ ಸುಮಾರು 50 ಲಕ್ಷ ರೂ. ನಿರೀಕ್ಷಿಸಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಸ್‌.ವಿ. ಹಿತ್ತಲಮನಿ ಹೇಳಿದ್ದಾರೆ.

25,000ಕ್ಕೂ ಅಧಿಕ ಚಿಕುನ್‌ಗುನ್ಯಾ ಪೀಡಿತರು ಆಸ್ಪತ್ರೆಗೆ
ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದ ಸುಮಾರು 25,000ಕ್ಕೂ ಅಧಿಕ ಜನರನ್ನು ಚಿಕುನ್‌ಗುನ್ಯಾ ಪೀಡಿತರೆಂದು ಗುರ್ತಿಸಲಾಗಿದೆ ಎಂದು ಕೇರಳದ ಆರೋಗ್ಯ ಸಚಿವ ಪಿ. ಕೆ . ಶ್ರೀಮತಿ ಹೇಳಿದ್ದಾರೆ.

ಸೊಳ್ಳೆಗಳಿಂದ ಹರಡುವ ಈ ಕಾಯಿಲೆಯಿಂದ ಕೊಟ್ಟಾಯಂ, ಎರ್ನಾಕುಲಂ, ತಿರುವನಂತಪುರಂ ಹಾಗೂ ಕೊಲ್ಲಂ ಜಿಲ್ಲೆಯ ಜನರು ಹೆಚ್ಚಾಗಿ ತೊಂದರೆಗೆ ಒಳಗಾಗಿದ್ದಾರೆ. ಸೊಳ್ಳೆ ನಿಯಂತ್ರಣ ಅಭಿಯಾನವನ್ನು ಮಾಡಲು ಕೇರಳ ಸರ್ಕಾರ ಮುಂದಾಗಿದೆ.

English summary
News Bytes, news alerts, news digest, brief announcements, Karnataka engagements.: Bangalore-Karnataka-India-World news pipeline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X