ಸಂಜಯ್ ದತ್‌ಗೆ ಎ.ಕೆ.56 ಪೂರೈಸಿದ ವ್ಯಕ್ತಿ ಜೈಲು ಪಾಲು
ಮುಂಬೈ : 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಿವುಡ್ ನಿರ್ಮಾಪಕ ಸಮೀರ್ ಹಿಂಗೋರಾಗೆ 9ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ನ್ಯಾಯಾಲಯ ಶುಕ್ರವಾರ ವಿಧಿಸಿದೆ.
ಜ.19, 1993ರಂದು ನಟ ಸಂಜಯ್‌ದತ್‌ಗೆ ಎ.ಕೆ.56 ರೈಫಲ್ ಪೂರೈಸಿದ ಆರೋಪದ ಮೇಲೆ ಸಮೀರ್ ಹಿಂಗೋರಾಗೆ, ವಿಶೇಷ ಟಾಡಾ ನ್ಯಾಯಾಲಯ ಶಿಕ್ಷೆ ಮತ್ತು 2 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ. ಸಮೀರ್ ಸೇರಿದಂತೆ ಇಂದು ಐದು ಮಂದಿಗೆ ಶಿಕ್ಷೆ ಪ್ರಕಟಿಸಲಾಯಿತು.
ಮುಖ್ಯ ಆರೋಪಿ ದಾವುಡ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಸೂಚನೆ ಮೇರೆಗೆ ಸಂಜಯ್‌ದತ್‌ಗೆ, ಸಮೀರ್ ಎ.ಕೆ.56 ಪೂರೈಸಿದ್ದ ಎನ್ನಲಾಗಿದೆ.
(ಏಜನ್ಸೀಸ್)












Click it and Unblock the Notifications