ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಇಇಇ ಪರೀಕ್ಷೆ : ಬೆಂಗ್ಳೂರ್‌ ಬಾಲಕನಿಗೆ 6ನೇ ರ್ಯಾಂಕ್‌

By Staff
|
Google Oneindia Kannada News

ಬೆಂಗಳೂರು : ಅಖಿಲ ಭಾರತ ಇಂಜಿನೀಯರಿಂಗ್‌ ಪ್ರವೇಶ ಪರೀಕ್ಷೆ(ಎಐಇಇಇ)ಯಲ್ಲಿ ನಗರದ ಬಾಲಕ ಕಶ್ಯಪ್‌ ಆರ್‌.ಪುರಾಣಿಕ್‌ ದೇಶಕ್ಕೇ 6ನೇ ರ್ಯಾಂಕ್‌ ಗಳಿಸಿದ್ದಾನೆ.

ಕುಮಾರನ್ಸ್‌ ಚಿಲ್ಡ್ರನ್‌ ಹೋಮ್‌ನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿರುವ ಕಶ್ಯಪ್‌, ಈ ಪರೀಕ್ಷೆಯಲ್ಲಿ ದೇಶಕ್ಕೇ 6ನೇ ರ್ಯಾಂಕ್‌ ಪಡೆದಿರುವುದಲ್ಲದೆ ರಾಜ್ಯಕ್ಕೇ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. 360 ಅಂಕಗಳನ್ನೊಳಗೊಂಡ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳಲ್ಲಿ ಕಶ್ಯಪ್‌ 334 ಅಂಕ ಪಡೆದಿದ್ದಾನೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಈ ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು, ಕೇಂದ್ರ ಸರ್ಕಾರದ ಅನುದಾನ ಪಡೆಯುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ಪಡೆಯುತ್ತಾರೆ.

ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷೆ(ಕರ್ನಾಟಕ ಸಿಇಟಿ)ಯ ಇಂಜಿನೀಯರಿಂಗ್‌ ವಿಭಾಗದಲ್ಲಿ, ಕಶ್ಯಪ್‌ 26ನೇ ರ್ಯಾಂಕ್‌ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಐಜಿಟಿ-ಜೆಇಇ 2007ರ ಪರೀಕ್ಷೆಯಲ್ಲಿ 237ನೇ ರ್ಯಾಂಕ್‌ ಪಡೆದಿರುವ ಈತ, ಚೆನ್ನೈನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಇಂಜಿನೀಯರಿಂಗ್‌ ಓದುವ ಆಸೆ ಹೊತ್ತಿದ್ದಾನೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X