ಸಾಲದ ಬಾಧೆ : ಗದಗ ಜಿಲ್ಲೆಯಲ್ಲಿ ಓರ್ವ ರೈತನ ಆತ್ಮಹತ್ಯೆ
ಹುಬ್ಬಳ್ಳಿ : ಸಾಲದ ಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ನೆಲ್ಲೂರು ಗ್ರಾಮದಲ್ಲಿ ನಡೆದಿದೆ.
ಬೆಲ್ಲುಂಡೆಪ್ಪ ಬೆಲ್ಲಪ್ಪನವರ್(44) ಮೃತ ದುರ್ದೈವಿ. ವ್ಯವಸಾಯಕ್ಕಾಗಿ ಮಾಡಿದ್ದ ಸಾಲ ಮರಳಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಬೆಲ್ಲುಂಡೆಪ್ಪ ಈ ತೀರ್ಮಾನಕ್ಕೆ ಬಂದಿದ್ದ ಎನ್ನಲಾಗಿದೆ.
ವಿಷ ಸೇವಿಸಿದ್ದ ಬೆಲ್ಲುಂಡೆಪ್ಪನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಎಂದು ಪೊಲೀಸ್ ಮೂಲಗಳು ಹೇಳಿವೆ.
(ಯುಎನ್‌ಐ)












Click it and Unblock the Notifications